ಗ್ರಾಹಕರಿಗೆ ತಟ್ಟಲಿದೆ Bank ನೌಕರರ ಮುಷ್ಕರದ ಬಿಸಿ.

ಬರೋಬ್ಬರಿ ನಾಲ್ಕು ದಿನ ಬ್ಯಾಂಕ್ ಬಂದ್ ಆಗಲಿದ್ದು ಬ್ಯಾಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರಿಗೆ ಬಿಸಿ ತಟ್ಟಲಿದೆ. ಸಾಲು ಸಾಲು ರಜೆಯ ಜೊತೆಗೆ ಬ್ಯಾಂಕ್ ಸಿಬ್ಬಂದಿ ವರ್ಷ ಮುಷ್ಕರ ನಡೆಸಲು ನಿರ್ಧರಿಸಿದ್ದು ನಾಳೆಯಿಂದ ನಾಲ್ಕು ದಿನಗಳು ಬ್ಯಾಂಕ್ಗಳು ಬಂದ್ ಆಗಲಿದ್ದು, ಬ್ಯಾಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬ್ಯಾಂಕ್ ವ್ಯವಹಾರ ಇದ್ರೆ ಇಂದೇ ಮುಗಿಸಿಕೊಳ್ಳಿ
ವಾರಾಂತ್ಯದ ರಜೆ ಜೊತೆಗೆ ಬ್ಯಾಂಕ್ ಸಿಬ್ಬಂದಿ ಮುಷ್ಕರಕ್ಕೆ ಕರೆ ಕೊಟ್ಟಿರೋ ಹಿನ್ನೆಲೆ ಜನವರಿ 24, 25, 26 ಹಾಗೂ 27ರವರೆಗೆ ಎಲ್ಲಾ Bank ಗಳು ಬಂದ್ ಆಗಲಿದ್ದು, ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಜನವರಿ 24 ರಂದು ನಾಲ್ಕನೇ ಶನಿವಾರ ಇದ್ದು, 25 ಭಾನುವಾರ, ಜನವರಿ 26 ಗಣರಾಜ್ಯೋತ್ಸವ ಇರೋದ್ರಿಂದ ಬ್ಯಾಂಕ್ ರಜೆ ಇತ್ತು. ಇದ್ರ ಜೊತೆಗೆ ಜನವರಿ 27 ರಂದು ಬ್ಯಾಂಕ್ ಸಿಬ್ಬಂದಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಒಟ್ಟು 4 ದಿನ ಬ್ಯಾಂಕ್ ಬಂದ್ ಆಗಲಿದ್ದು, ಗ್ರಾಹಕರು ಪರದಾಡುವಂತೆ ಆಗಲಿದೆ.
ಇದನ್ನು ಓದಿ : Palash Muchhal ಮೇಲೆ ಮತ್ತೊಂದು ವಿವಾದ – ಹಣ ಕೊಡದೇ ವಂಚನೆ!

ಹಣಕಾಸಿನ ವ್ಯವಹಾರ ನಡೆಸುವವರಿಗೆ ಶಾಕ್
ಇನ್ನು ವಾರದಲ್ಲಿ ಐದು ದಿನ ಕೆಲಸದ ಅವಧಿಗೆ ಬ್ಯಾಂಕ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದು, ವಾರದಲ್ಲಿ ಎರಡು ದಿನ ರಜೆಗೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಜನವರಿ 27 ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದು, ನಾಲ್ಕು ದಿನ ಬ್ಯಾಂಕಿಂಗ್ ಸೇವೆ ವ್ಯತ್ಯಯ ಉಂಟಾಗಲಿದ್ದು, ಹಣಕಾಸಿನ ವ್ಯವಹಾರ ನಡೆಸುವವರಿಗೆ ಶಾಕ್ ನೀಡಿದೆ.
ಮೊಬೈಲ್ ನಲ್ಲೇ ಹಣಕಾಸು ವ್ಯವಹಾರ ನಡೆಸೋದು ಸೇಫ್
ಆದ್ರೆ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ವ್ಯವಹಾರಕ್ಕೆ ನಡೆಸಬಹುದು. ಆದ್ರೆ ಹಣ ವಿತ್ ಡ್ರಾ, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್ ಸೇರಿದಂತೆ ಇತರೆ ಬ್ಯಾಂಕ್ ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಮಸ್ಯೆ ಎದುರಿಸಬೇಕಾಗಲಿದೆ.

ಇದನ್ನು ನೋಡಿ : ‘ಹಯಗ್ರೀವ‘ ಟೀಸರ್ ಔಟ್; ಅಬ್ಬರಿಸಿದ ಧನ್ವೀರ್, ಪಾತ್ರ ಏನು?




