ಸ್ಮೃತಿ ಮಂದಾನ ಜೊತೆ ಮದುವೆ ರದ್ದು ಬಳಿಕ Palash Muchhal ರಿಂದಮತ್ತೊಂದು ವಿವಾದ : ಹಣ ಕೊಡದೇ ವಂಚನೆ!

ಪಲಾಶ್ ಮುಚ್ಚಾಲ್ ಸ್ಮೃತಿ ಮಂದಾನ ಜೊತೆ ಮದುವೆ ರದ್ದು ಮಾಡಿಕೊಂಡ ಬಳಿಕ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಪಲಾಶ್ ಮುಚ್ಚಾಲ್ ಮೇಲೆ ಸಿನಿಮಾ ನಿರ್ಮಾಣಕ್ಕೆ 40 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಿದಾನ್ಯಾನ್ ಮಾನೆ ಪೊಲೀಸ್ ದೂರು ಸಲ್ಲಿಸಿದ್ದಾರೆ.
ಹಣ ಕೊಡದೇ ವಂಚನೆ!
2023 ರ ಡಿಸೆಂಬರ್ 5 ರಂದು ಮೊದಲ ಭಾರಿಗೆ ಪಲಾಶ್ ಮುಚ್ಚಾಲ್- ವಿದಾನ್ಯಾನ್ ಮಾನೆ ಭೇಟಿಯಾಗಿದ್ದರು. ಈ ವೇಳೆ ಸಿನಿಮಾ ನಿರ್ಮಾಣದಲ್ಲಿ ಹಣ ಹೂಡಿಕೆಯ ಆಸಕ್ತಿ ಯನ್ನು ವಿದಾನ್ಯಾನ್ ಮಾನೆ ತೋರಿದ್ದರು. ತನ್ನ ಮುಂದಿನ ಸಿನಿಮಾ ನಜಾರಿಯಾ ದಲ್ಲಿ ಹಣ ಹೂಡಲು ಪಲಾಶ್ ಮುಚ್ಚಾಲ್ ಹೇಳಿದ್ದರು.
ಸಿನಿಮಾ ಓಟಿಟಿ ಯಲ್ಲಿ ಬಿಡುಗಡೆ ಬಳಿಕ 25 ಲಕ್ಷ ರೂಪಾಯಿಗೆ 12 ಲಕ್ಷ ರೂಪಾಯಿ ಲಾಭ ಗಳಿಕೆಯ ಆಮಿಷವೊಡ್ಡಿ ದ್ದರು. ಜೊತೆಗೆ ಸಿನಿಮಾದಲ್ಲಿ ವಿದಾನ್ಯಾನ್ ಮಾನೆಗೆ ನಟನೆಯ ಆಫರ್ ಅನ್ನು Palash Muchhal ನೀಡಿದ್ದರು.
ಇದನ್ನು ಓದಿ : JDS ಮುಖಂಡನ ಮೇಲೆ ಪುರಸಭೆ ಸದಸ್ಯನಿಂದ ಹಲ್ಲೆ

ಪೊಲೀಸ್ ಠಾಣೆಗೆ ದೂರು
ಹೀಗಾಗಿ ಬಳಿಕ ಎರಡು ಭಾರಿ ಭೇಟಿಯಾಗಿ 40 ಲಕ್ಷ ರೂಪಾಯಿ ಹಣವನ್ನು ವಿದಾನ್ಯಾನ್ ಮಾನೆ, ಪಲಾಶ್ ಮುಚ್ಚಾಲ್ ಗೆ ನೀಡಿದ್ದರು. ಆದರೆ ಸಿನಿಮಾ ನಿರ್ಮಾಣ ಪೂರ್ಣವಾಗಲಿಲ್ಲ . ಹೀಗಾಗಿ ತನ್ನ ಹಣ ವಾಪಸು ನೀಡುವಂತೆ ಪಲಾಶ್ ಮುಚ್ಚಾಲ್ ಗೆ ವಿದಾನ್ಯಾನ್ ಮಾನೆ ಬೇಡಿಕೆ ಇಟ್ಟಿದ್ದರು.
ಯಾವುದೇ ಪ್ರತಿಕ್ರಿಯೆ ಬಾರದ ಕಾರಣದಿಂದ, ಅವರು ಸಾಂಗ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಸ್ತುತ, ಸಾಂಗ್ಲಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿರುವುದು ತಿಳಿದುಬಂದಿದೆ.

ಇದನ್ನು ನೋಡಿ : ಗಿಲ್ಲಿಗೆ ಉಘೇ ಎಂದ ರಾಜಕೀಯ ನಾಯಕರು; ಒಬ್ಬರಾದ ಬಳಿಕ ಒಬ್ಬರ ಭೇಟಿ




