JDS ಮುಖಂಡನ ಮೇಲೆ ಹಲ್ಲೆ – ಪುರಸಭೆ ಆವರಣದಲ್ಲೇ ಪುರಸಭೆ ಸದಸ್ಯನಿಂದ ಇದೆಂಥಾ ಹಲ್ಲೆ?

ಪುರಸಭೆ ಆವರಣದಲ್ಲೇ ಇಬ್ಬರ ಮಧ್ಯೆ ಮಾರಾಮಾರಿ ನಡೆದಿದ್ದು, ಗಲಾಟೆಯ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪುರಸಭೆ ಆವರಣದಲ್ಲಿ ಮಾರಾಮಾರಿ ನಡೆದಿರೋ ಪ್ರಕರಣ ಬೆಳಕಿಗೆ ಬಂದಿದೆ.
ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ
ವಿಜಯಪುರ JDS ಮುಖಂಡ ಸಾದತ್ ಪಾಷಾ ಮೇಲೆ ಪುರಸಭೆ ಸದಸ್ಯ ಹನೀಫುಲ್ಲಾ ಎಂಬಾತ ಹಲ್ಲೆ ಮಾಡಿದ್ದಾನೆ. ನಿನ್ನೆ ಕೆಲಸ ಮೇಲೆ ಜೆಡಿಎಸ್ ಮುಖಂಡ ವಿಜಯಪುರ ಪುರಸಭೆಗೆ ಆಗಮಿಸಿದ್ರು. ಈ ವೇಳೆ ಪುರಸಭೆ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡನಾದ ಹನೀಫುಲ್ಲಾ, ಸಾದತ್ ಪಾಷನನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ನಡುವೆ ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿದ್ದು, ಸಾದತ್ ಪಾಷಾ ಮೇಲೆ ಹಲ್ಲೆ ಮಾಡಿದ್ದಾನೆ.
ಇದನ್ನು ಓದಿ : Yadagiri : ಶಿಕ್ಷಕರು ಬೈದಿದ್ದಕ್ಕೆ ಬೇಸತ್ತು ವಿದ್ಯಾರ್ಥಿ ದುರಂತ ಅಂತ್ಯ?
ಹಳೇ ಧ್ವೇಷ ಹಿನ್ನೆಲೆ ಹಲ್ಲೆ ಮಾಡಿರುವ ಆರೋಪ
ಇನ್ನು ಜೆಡಿಎಸ್ ಮುಖಂಡ ಸಾದತ್ ಪಾಷನನ್ನು ಪುರಸಭೆ ಆವರಣದಲ್ಲೇ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದು, ಸ್ಥಳೀಯರು ಮೊಬೈಲ್ನಲ್ಲಿ ಮಾರಾಮಾರಿಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಹಳೆ ದ್ವೇಷ ಹಿನ್ನೆಲೆ ಜೆಡಿಎಸ್ ಮುಖಂಡ ಸಾದತ್ ಪಾಷಾ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪವನ್ನು ಮಾಡಲಾಗಿದ್ದು, ಹಲ್ಲೆಯಿಂದ ಗಾಯಗೊಂಡ ಸಾದತ್ ಪಾಷನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನು ನೋಡಿ : ಮನರೇಗಾ ಯೋಜನೆ ಬದಲಾವಣೆ ವಿರೋಧಿಸಿ ತಮಿಳುನಾಡು ಅಸೆಂಬ್ಲಿಯಲ್ಲಿ ನಿರ್ಣಯ ಅಂಗೀಕಾರ




