Yadagiri : ಶಾಲಾ ಆವರಣದಲ್ಲೇ ಒಂಬತ್ತನೇ ತರಗತಿ ಬಾಲಕ ಸಾವು.

ಅಕ್ಷರ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ವಿದ್ಯಾರ್ಥಿಯೊಬ್ಬ ಶಾಲಾ ಆವರಣದಲ್ಲೇ ಅಕಾಲಿಕ ಮರಣಕ್ಕೀಡಾಗಿರುವ ಘಟನೆ Yadagiri ಜಿಲ್ಲೆಯ ವಡಗೇರಾ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಶಿಕ್ಷಕರ ನಿಂದನೆಯೇ ಬಾಲಕನ ಈ ನಿರ್ಧಾರಕ್ಕೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.ಘಟನೆಯ ವಿವರ ಮೃತ ಬಾಲಕನನ್ನು ಪವನ್ (15) ಎಂದು ಗುರುತಿಸಲಾಗಿದೆ.
ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆ
ಈತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಜನವರಿ 21 ರಂದು ಮಧ್ಯಾಹ್ನ ಶಾಲೆಯ ಮರದ ಕೆಳಗೆ ಪವನ್ ಶವ ಪತ್ತೆಯಾಗಿದೆ. ಬಾಲಕ ಮರಕ್ಕೆ ಕಟ್ಟಿದ್ದ ಹಗ್ಗಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಸ್ವಯಂ ಪ್ರೇರಿತ ಸಾವು ಎನ್ನಲಾಗುತ್ತಿದೆ.

ಇದನ್ನು ಓದಿ : ವೈರಲ್ ವಿಡಿಯೋದಿಂದ ಮನನೊಂದು ವೈದ್ಯ Suicide! ಕೇರಳ ಬೆನ್ನಲ್ಲೇ ಕರ್ನಾಟಕದಲ್ಲೂ ನಡೆಯಿತು ದುರಂತ!
ಶಿಕ್ಷಕರು ಕಾರಣವಿಲ್ಲದೆ ತನ್ನನ್ನು ಬೈಯುತ್ತಿದ್ದಾರೆ
ಶಾಲೆಯಲ್ಲಿ ಶಿಕ್ಷಕರು ಕಾರಣವಿಲ್ಲದೆ ತನ್ನನ್ನು ಬೈಯುತ್ತಿದ್ದಾರೆ ಎಂದು ಪವನ್ ಈ ಹಿಂದೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಕುಟುಂಬಸ್ಥರು, ಶಾಲಾ ಶಿಕ್ಷಕರ ಮಾನಸಿಕ ಒತ್ತಡ ಮತ್ತು ನಿಂದನೆಯಿಂದ ಬೇಸತ್ತ ಪವನ್ Suicide ಮಾಡಿಕೊಂಡು ಎಂದು ಆರೋಪಿಸುತ್ತಿದ್ದಾರೆ.
6 ಶಿಕ್ಷಕರ ವಿರುದ್ಧ FIR ದಾಖಲು
ಘಟನೆಯ ಹಿನ್ನೆಲೆಯಲ್ಲಿ, ಮುಖ್ಯ ಶಿಕ್ಷಕ ಅಯ್ಯಪ್ಪ ಸೇರಿದಂತೆ ಒಟ್ಟು 6 ಶಿಕ್ಷಕರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಮೇರೆಗೆ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ನೋಡಿ : SURESH GOWDA | ಕಾಂಗ್ರೆಸ್ ಸರ್ಕಾರ ಗೂಂಡಾಗಿರಿ ಸರ್ಕಾರ- ಶಾಸಕ ಸುರೇಶ್ ಗೌಡ




