Kerala ಬಳಿಕ ವೈರಲ್ ವಿಡಿಯೋಗೆ ಉತ್ತರ ಕನ್ನಡದ ಮತ್ತೊಬ್ಬ ವ್ಯಕ್ತಿ ಬಲಿ; ತುಳಸಿ ಗಿಡದ ಮುಂದೆ ಪ್ರಾಣಬಿಟ್ಟ ವ್ಯಕ್ತಿ!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ವಿಡಿಯೋದಿಂದ ಕೇರಳದಲ್ಲಿ ಒಬ್ಬ ವ್ಯಕ್ತಿ ಮನನೊಂದು ನೇಣಿಗೆ ಶರಣಾಗಿದ್ದರು. ಮಹಿಳೆಯೊಬ್ಬರು ಬಸ್ನಲ್ಲಿ ಮಾಡಿದ್ದ ಒಂದು ವಿಡಿಯೋದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ವೈರಲ್ ವಿಡಿಯೋದಿಂದ ಮನನೊಂದು ವೈದ್ಯ ಆತ್ಮಹತ್ಯೆ!
ಇದೀಗ ಕರ್ನಾಟಕದಲ್ಲೂ ಅಂತಹದ್ದೇ ಒಂದು ದುರಂತ ನಡೆದಿದೆ. ಕಾರವಾರ ಜಿಲ್ಲೆಯಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಪೀಕ್ಳೆ ನರ್ಸಿಂಗ್ ಹೋಮ್ನ ಖ್ಯಾತ ವೈದ್ಯರಾದ ರಾಜು ಪಿಕ್ಳೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗನ್ ನಿಂದ ಶೂಟ್ ಮಾಡಿಕೊಂಡು Suicide
ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಮನೆಯಲ್ಲೇ ಈ ದುರ್ಘಟನೆ ನಡೆದಿದ್ದು, ವೈದ್ಯ ರಾಜು ಪಿಕ್ಳೆ ಡಬಲ್ ಬ್ಯಾರಲ್ ಗನ್ ನಿಂದಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ವೈದ್ಯ ಸಮುದಾಯ ಮತ್ತು ಸಾರ್ವಜನಿಕರಲ್ಲಿ ತೀವ್ರ ಆಘಾತ ಮೂಡಿಸಿದೆ.
ಇದನ್ನು ಓದಿ : Raichur : ಬಸ್ ಹರಿದು 4 ವರ್ಷದ ಕಂದಮ್ಮ ದಾರುಣ ಸಾವು

ಘಟನೆ ಹಿನ್ನೆಲೆ
ವೈದ್ಯ ರಾಜು ಪಿಕ್ಳೆ ಹಲವು ವರ್ಷಗಳಿಂದ ಪೀಕ್ಳೆ ನರ್ಸಿಂಗ್ ಹೋಮ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಸ್ಥಳೀಯ ಜನರಲ್ಲಿ ಅವರು ಗೌರವ ಮತ್ತು ವಿಶ್ವಾಸ ಪಡೆದಿದ್ದರು. ಆದರೆ ಕಳೆದ ಹದಿನೈದು ದಿನಗಳ ಹಿಂದೆ, ಅವರ ವಿರುದ್ಧ “ಅವಧಿ ಮೀರಿದ ಮಾತ್ರೆ ನೀಡಿದ” ಎಂಬ ಆರೋಪ ಸಂಬಂಧಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಾನಸಿಕ ಖಿನ್ನತೆ
ವೈರಲ್ ವಿಡಿಯೋದಲ್ಲಿ ವ್ಯಕ್ತಿತ್ವಕ್ಕೆ ಹಾಗೂ ವೃತ್ತಿಪರ ಗೌರವಕ್ಕೆ ಆಗಿರುವ ಧಕ್ಕೆ, ಸಾರ್ವಜನಿಕ ಟೀಕೆ ಮತ್ತು ಸಾಮಾಜಿಕ ಜಾಲತಾಣ ಪ್ರತಿಕ್ರಿಯೆಗಳು ಅವರನ್ನು ನಿಸ್ಸಹಾಯಕ ಸ್ಥಿತಿಗೆ ತಳ್ಳಿದವು. ಇದರಿಂದ ಮನನೊಂದ ವೈದ್ಯ ರಾಜು ಅವರು ಇಂದು ಬೆಳಿಗ್ಗೆ, ತಮ್ಮ ನಿವಾಸದಲ್ಲೇ ಡಬಲ್ ಬ್ಯಾರಲ್ ಗನ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸ್ ಭೇಟಿ ಮತ್ತು ತನಿಖೆ
ಮನೆಯವರು ಈ ವಿಷಯ ಗಮನಿಸಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನು ನೋಡಿ : ಬೆಂಗಳೂರು : ಜೂನಿಯರ್ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ : 22 ಮಂದಿ ವಿರುದ್ದ `FIR’ ದಾಖಲು.!




