ಜಿಲ್ಲೆಯ ಸಂಸದರಾದಂತ B.Y Raghavendra ಪ್ರಯಾಣಿಸುತ್ತಿದ್ದಂತ ಕಾರು ಅಪಘಾತಗೊಂಡಿದೆ.

ಶಿವಮೊಗ್ಗ ಜಿಲ್ಲೆಯ ಸಂಸದರಾದ ಬಿವೈ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಸಂಸದ ಬಿವೈ ರಾಘವೇಂದ್ರ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.
ಸಂಸದರ ಕಾರಿಗೆ ಹಾನಿ
ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿ ಗ್ರಾಮದ ಸಮೀಪ ಸಂಸದ ಬಿವೈ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರಿಗೆ ಹಿಂದಿನಿಂದ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಸಂಸದರ ಕಾರಿಗೆ ಹಾನಿಯಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಬಿವೈ ರಾಘವೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಇದನ್ನು ಓದಿ : OTT ಯಲ್ಲೂ ಒಂದೇ ದಿನ ‘45’-‘ಮಾರ್ಕ್’ ಸಿನಿಮಾ ರಿಲೀಸ್

ಅಧಿಕಾರಿಗಳಿಂದ ಪರಿಶೀಲನೆ
ಕಾರಿಗೆ ಹಾನಿಯಾಗಿದ್ದರಿಂದ ಸಂಸದ B.Y Raghavendra, ಇತರೆ ಸಿಬ್ಬಂದಿಗಳು ಮತ್ತೊಂದು ಕಾರಿನಲ್ಲಿ ತಮ್ಮ ಪ್ರಯಾಣ ಮುಂದುವರೆಸಿದರು ಎನ್ನಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಅಡ್ಡ ಬಾಯಿ ಹಾಕಿದ ಮಾಜಿ ಸಚಿವ ರೇವಣ್ಣ – ರೇವಣ್ಣ ಮೇಲೆ ಸಿಟ್ಟಾದ ಕುಮಾರಸ್ವಾಮಿ




