ಡಿಸೆಂಬರ್ 25ರಂದು ತೆರೆಕಂಡ ‘ಮಾರ್ಕ್’ ಮತ್ತು ’45’ ಚಿತ್ರಗಳು ಈಗ OTT ಗೆ ಬರುತ್ತಿವೆ.

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಾದ ಶಿವರಾಜ್ಕುಮಾರ್, ರಾಜ್ ಬಿ ಶೆಟ್ಟಿ ಹಾಗೂ ಉಪೇಂದ್ರ ನಟನೆಯ ‘45’ ಮತ್ತು ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಒಂದೇ ದಿನ ಥಿಯೇಟರ್ನಲ್ಲಿ ಬಿಡುಗಡೆಯಾದವು.
OTT ವೇದಿಕೆಯಲ್ಲಿ ಬಿಡುಗಡೆಯಾಗಲು ಸಿದ್ಧ
ಡಿಸೆಂಬರ್ 25ರಂದು ತೆರೆಕಂಡ ಈ ಎರಡೂ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿದ್ದು, ಇದೀಗ OTT ವೇದಿಕೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿವೆ. ವಿಶೇಷವೆಂದರೆ, ಎರಡೂ ಸಿನಿಮಾಗಳು ಒಂದೇ ದಿನ OTTಯಲ್ಲಿ ಪ್ರಸಾರ ಆರಂಭಿಸಲಿವೆ.
50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್
ಬಾಕ್ಸ್ ಆಫೀಸ್ನಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಯಶಸ್ಸು ಕಂಡಿರುವ ‘ಮಾರ್ಕ್’ ಸಿನಿಮಾ ಕನ್ನಡದ ಜೊತೆಗೆ ತಮಿಳು ಭಾಷೆಯಲ್ಲೂ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ನಾಯಕನಾಗಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಮ್ಯಾಕ್ಸ್’ ಶೇಡ್ನ ಪಾತ್ರದಲ್ಲಿ ಸುದೀಪ್ ಅಭಿನಯಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನು ಓದಿ : ಮಲ ಹೊರುವ ಪದ್ಧತಿ ಇನ್ನೂ ಜೀವಂತ – ಕಾರ್ಮಿಕರನ್ನು ಶೌಚ ಗುಂಡಿಗಿಳಿಸಿ ಸ್ವಚ್ಛತೆ

ವಿಜಯ್ ಕಾರ್ತಿಕೇಯ ನಿರ್ದೇಶ
ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಸಿನಿಮಾ ಎರಡು ದಿನಗಳಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಕನ್ನಡದ ಜೊತೆಗೆ ತಮಿಳು ಪ್ರೇಕ್ಷಕರೂ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಥಿಯೇಟರ್ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಅಥವಾ ಮತ್ತೊಮ್ಮೆ ವೀಕ್ಷಿಸಲು ಬಯಸುವವರು ಜನವರಿ 23ರಿಂದ ಜಿಯೋ ಹಾಟ್ಸ್ಟಾರ್ನಲ್ಲಿ ‘ಮಾರ್ಕ್’ ಸಿನಿಮಾ ವೀಕ್ಷಿಸಬಹುದು.
ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ
ಸಂಗೀತ ಸಂಯೋಜಕ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ‘45’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಯನ್ನು ಚಿತ್ರ ಸಂಪೂರ್ಣವಾಗಿ ತಲುಪಲಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಗರುಡ ಪುರಾಣದ ಕಥೆಯನ್ನು ಆಧರಿಸಿ, ಒಂದೊಳ್ಳೆಯ ಸಂದೇಶದೊಂದಿಗೆ ಸಿನಿಮಾ ಮೂಡಿಬಂದಿದೆ.
ಇದನ್ನು ನೋಡಿ : ವಸಂತ ನರಸಾಪುರದಲ್ಲಿ ತಲೆಎತ್ತಿವೆ ಅನಧಿಕೃತ ವಾಣಿಜ್ಯ ಮಳಿಗೆಗಳು…!?





