Haveri ಯಲ್ಲಿ ಮಲ ಹೊತ್ತ ಕಾರ್ಮಿಕರು.

Haveri : ರಾಜ್ಯದಲ್ಲಿ ಮಲ ಹೊರುವ ಪದ್ಧತಿಯನ್ನು ಸಂಪೂರ್ಣ ನಿಷೇಧಗೊಳಲಾಗಿದೆ. ಎಲ್ಲಿಯೂ ಕೂಡ ಮಲ ಹೊರುವ ಪದ್ಧತಿಯನ್ನು ಜಾರಿಗೆ ತರಬಾರದು, ಕಾರ್ಮಿಕರನ್ನು ಯಾವುದೇ ಸೂಕ್ತ ವ್ಯವಸ್ಥೆಯಿಲ್ಲದೆ ಸ್ವಚ್ಛಗೊಳಿಸಬಾರದು ಎಂದು ಕಟ್ಟುನಿಟ್ಟಿನ ಕಾನೂನು ಇದೆ.
ಮಲ ಹೊರುವ ಪದ್ದತಿ ಸಂಪೂರ್ಣವಾಗಿ ನಿಷೇಧ
ಅದ್ಯಾವಾಗ ಸವಣೂರು ಪ್ರಕರಣವಾಯ್ತು ಅಂದಿನಿಂದ ಇಂದಿನವರೆವಿಗೂ ಕೂಡ ಮಲಹೊರುವ ಪದ್ಧತಿಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ನಡುವೆಯೂ ಮತ್ತೆ ಹಾವೇರಿ ಜಿಲ್ಲೆಯ ಕೊಸನೂರು ಗ್ರಾಮದಲ್ಲಿ ಕಾರ್ಮಿಕರಿಂದ ಪಿಟ್ ಗುಂಡಿ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿಸಿದ್ದು, ಎಲ್ಲೆ ಆಕ್ರೋಶ ವ್ಯಕ್ತವಾಗುತ್ತಿದೆ.
ಮಲವನ್ನು ತಲೆಯ ಮೇಲೆ ಹೊತ್ತು ಸ್ವಚ್ಛ
ಹೌದು.. ಇಬ್ಬರು ಕಾರ್ಮಿಕರು ಯಾವುದೇ ಯಂತ್ರೋಪಕರಣ, ಪರಿಕರಗಳಿಲ್ಲದೆ ತಾಲೂಕಿನ ಕೂಸನೂರು ಗ್ರಾಮದ ಸುರೇಶ ಪೂಜಾರ ಹಾಗೂ ಬಸವರಾಜ ಪೂಜಾರ ಅವರ ಶೌಚಾಲಯದ ಮಲದ ಗುಂಡಿ ಸ್ವಚ್ಛಗೊಳಿಸಿ, ಮಲವನ್ನು ತಲೆಯ ಮೇಲೆ ಹೊತ್ತು ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ.
ಇದನ್ನು ಓದಿ : ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಆಸ್ಟ್ರೇಲಿಯಾ ದಾಂಡಿಗ

ಅಮಾನವೀಯ ಕಾರ್ಯ
ಇತ್ತ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಾನಗಲ್ ತಹಶೀಲ್ದಾರ್ ರೇಣುಕಾ .ಎಸ್. ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಮ್ಮ ಹಿರೇಮಠ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಅಮಾನವೀಯ ಕಾರ್ಯವನ್ನು ಕಂಡು ಅಧಿಕಾರಿಗಳು, ಕೂಡಲೇ ಕೆಲಸವನ್ನು ಸ್ಥಗಿತಗೊಳಿಸಿದರು.
ಪ್ರಕರಣ ದಾಖಲು
ಬಳಿಕ ಮಲಗುಂಡಿಗೆ ಇಳಿದಿದ್ದ ಇಬ್ಬರು ಕಾರ್ಮಿಕರನ್ನು, ಗುಂಡಿಯಲ್ಲಿರುವ ವಿಷಕಾರಿ ಅನಿಲ ಮತ್ತು ಬ್ಯಾಕ್ಟೀರಿಯಾಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಕೂಡಲೇ ಚಿಕಿತ್ಸೆಗಾಗಿ ಆಡೂರು ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು. ಇನ್ನೂ ತಪ್ಪಿತಸ್ಥ ಆರೋಪಿಗಳ ಮೇಲೆ ಪ್ರಕರಣ ದಾಖಲು ಮಾಡುವಂತೆ ಸೂಚನೆ ನೀಡಿದ್ರು.
ಕಾನೂನು ಉಲ್ಲಂಘನೆ
ಇನ್ನೂ ಯಂತ್ರಗಳಿರುವ ಕಾಲದಲ್ಲೂ ಮನುಷ್ಯರ ಕೈಯಲ್ಲಿ ಮಲವನ್ನು ಬಾಚುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ. ಯಾವುದೇ ರಕ್ಷಣಾ ಕವಚಗಳು ಅಥವಾ ಯಂತ್ರಗಳಿಲ್ಲದೆ ಮಲದ ಗುಂಡಿ ಸ್ವಚ್ಚಗೊಳಿಸುವ ಕೆಲಸವನ್ನು ನಿರ್ವಹಿಸುವುದು.

ಶಿಕ್ಷಾರ್ಹ ಅಪರಾಧ
ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಕಾಯ್ದೆ-2013 ರ ಸ್ಪಷ್ಟ ಉಲ್ಲಂಘನೆಯಾಗಿದ್ದು. ಈ ಕಾಯ್ದೆ ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇನ್ನು ಈ ಘಟನೆಗೆ ಕಾರಣರಾದ ಆರೋಪಿಗಳ ಮೇಲೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : JCB SPARE PARTS ದರ ದಿಢೀರ್ ಏರಿಕೆ- ಜೆಸಿಬಿ ಮಾಲೀಕರ ಸಂಘದಿಂದ ಸಭೆ




