ಬೆಂಗಳೂರು-ಗದಗ ಪಲ್ಲಕ್ಕಿ ಬಸ್ಗೆ Haveri ಜಿಲ್ಲೆಯಲ್ಲಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋಯಿತು. ಚಾಲಕನ ಸಮಯಪ್ರಜ್ಞೆಯಿಂದ 17 ಪ್ರಯಾಣಿಕರು ಪಾರಾದರು.

ಬೆಂಗಳೂರುದಿಂದ ಗದಗಕ್ಕೆ ತೆರಳುತ್ತಿದ್ದ ಪಲ್ಲಕ್ಕಿ ಬಸ್ಗೆ ಹಠಾತ್ ಬೆಂಕಿ ತಗುಲಿ ಭಾರೀ ಅವಘಡ ಸಂಭವಿಸಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಕ್ಷಣಾರ್ಧದಲ್ಲಿ ಬೆಂಕಿ ಬಸ್ನ್ನು ಆವರಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ದೊಡ್ಡ ದುರಂತ ತಪ್ಪಿದೆ. ಚಾಲಕನ ಸಮಯಪ್ರಜ್ಞೆಯಿಂದ ಸುಮಾರು 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
MUST READ : ಲಕ್ನೋ ವಿರುದ್ಧ Mumbai ಗೆ 6 ವಿಕೆಟ್ಗಳ ಗೆಲುವು..!!

ಬೆಂಗಳೂರುದಿಂದ ಗದಗ ಕಡೆಗೆ ಹೊರಟಿದ್ದ (KA-57-F6680) ಸಂಖ್ಯೆಯ ಈ ಪಲ್ಲಕ್ಕಿ ಬಸ್ನಲ್ಲಿ ಸುಮಾರು 17ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಬ್ರೇಕ್ ಲೈನ್ ದೋಷವೇ ಈ ಬೆಂಕಿ ಅವಘಡಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಬೆಂಕಿ ಕಾಣುತ್ತಿದ್ದಂತೆಯೇ ಬಸ್ ಚಾಲಕ ಪಕ್ಕೀರಪ್ಪ ಪ್ರಯಾಣಿಕರನ್ನು ತಕ್ಷಣ ಇಳಿಸಿ ರಕ್ಷಿಸಲು ಮುಂದಾಗಿ, ಬಳಿಕ ಸ್ವತಃ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಈ ಘಟನೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಒಟ್ಟಾರೆ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದ ಘಟನೆ ಇದಾಗಿದೆ.
MUST WATCH : 3 ವರ್ಷವಾದ್ರೂ ಕನಿಷ್ಠ ಒಂದು ಮನೆ ಕೊಡಲು ಆಗಿಲ್ಲ ಸರ್ಕಾರದ ವಿರುದ್ಧ ಶಾಸಕ SURESH BABU ವಾಗ್ದಾಳಿ




