Mandya : ಎರಡು ದಿನ ಎಣ್ಣೆ ಸಿಗಲ್ಲ! ಯಾಕೆ..?

Mandya ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ನಡೆದ ವಿಜಯನಗರೇಶ್ವರಿ ದೇವರ ಜಾತ್ರಾ ಮಹೋತ್ಸವ ಅದ್ಭುತವಾಗಿ ಕಳೆಗಟ್ಟಿದೆ. ಈ ಜಾತ್ರೆ ಎರಡು ದಿನಗಳ ಕಾಲ ನಡೆಯುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದಾರೆ.
ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮ
ಸಹಜವಾಗಿ ಭಕ್ತರ ಭರತನ ಮತ್ತು ಯಾವುದೇ ಅಹಿತಕರ ಘಟನೆಗಳ ತಡೆಯಕ್ಕಾಗಿ ಮಂಡ್ಯ ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ.
ಇದನ್ನು ಓದಿ : ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಬರ್ಬರವಾಗಿ ಕೊಂದು ಎಸ್ಕೇಪ್

Mandya – 2 ದಿನ ಮದ್ಯ ಸಿಗಲ್ಲ
ಇನ್ನು ಇದರ ಭಾಗವಾಗಿ ಕಲ್ಕುಣಿ ಗ್ರಾಮ ಸೇರಿದಂತೆ ಸೂಕ್ತ ಮುತ್ತಲಿನ ಗ್ರಾಮಗಳಲ್ಲಿ ಸುಮಾರು ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯದ ಅಂಗಡಿ ತೆರೆಯದಂತೆ ಆದೇಶ ಹೊರಡಿಸಲಾಗಿದೆ. ಈ ನಿಷೇಧಾಗ್ನಿಯು ಜನವರಿ 20 ರ ರಾತ್ರಿ 10 ಗಂಟೆಯಿಂದ, 21ರ ರಾತ್ರಿ 10 ಗಂಟೆ ವರೆಗೆ ಇರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಮದ್ಯ ಪ್ರಿಯರಿಗೆ ಬೇಸರ
ಇನ್ನು ಈ ನಿಷೇಧಾಘ್ನೆಯು ಮದ್ಯ ಪ್ರಿಯರಿಗೆ ಕೊಂಚ ಬೇಸರ ತರಿಸಿದ್ದು, ಮಧ್ಯವಿಲ್ಲದೆ ಹಬ್ಬವನ್ನ ಹೇಗೆ ಆಚರಿಸುವುದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ನಾನಾ ಭಾಗಗಳಿಂದ ಗ್ರಾಮಕ್ಕೆ ಬಂದ ಭಕ್ತರು ದೇವರ ದರ್ಶನಕ್ಕೆ ಮುಂದಾಗಿದ್ದಾರೆ.

ಇದನ್ನು ನೋಡಿ : ತುಮಕೂರಿಗೆ ಉಪರಾಷ್ಟ್ರಪತಿ ಎಂಟ್ರಿ – ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವೈಸ್ ಪ್ರೆಸಿಡೆಂಟ್




