ಕುಡಿದ ಮತ್ತಿನಲ್ಲಿ ಗೆಳೆಯರು ಸ್ನೇಹಿತನನ್ನೇ ಇರಿದು Murder ಮಾಡಿದ್ದಾರೆ.

ಕುಡಿದ ಮತ್ತಿನಲ್ಲಿ ಗೆಳೆಯರು ಸ್ನೇಹಿತನನ್ನೇ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
ಸ್ನೇಹಿತನನ್ನೇ ಬರ್ಬರ Murder
ಗಣೇಶ್ (46) ಎಂಬುವ ವ್ಯಕ್ತಿ ಮೃತ ದುರ್ದೈವಿಯಾಗಿದ್ದು, ಅಶೋಕ್ ಮತ್ತು ಸುಧೀರ್ ಸ್ನೇಹಿತರು ಚಾಕುವಿನಿಂದ ಇರಿದು Murder ಮಾಡಿದ್ದಾರೆ. ಇನ್ನು ಕ್ಷುಲಕ ಕಾರಣಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳ.ನ್ನು ಹಳ್ಳಿಮೈಸೂರು ಪೊಲೀಸರು ಬಂಧಿಸಿದ್ದಾರೆ.
ಇದನ್ನು ನೋಡಿ : ಇನ್ಸ್ಪೆಕ್ಟರ್ ರವಿ ಸಸ್ಪೆಂಡ್ ಹಿಂದಿನ ರಹಸ್ಯವೇನು?

ಚಾಕುವಿನಿಂದ ಇರಿದು Murder
ಜ.19ರಂದು ಗಣೇಶ್ ಜಮೀನು ಕಾವಲು ಕಾಯಲು ತೆರಳಿದ್ದರು. ಅಲ್ಲಿಯೇ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದ, ಕ್ಷುಲ್ಲಕ ವಿಚಾರಕ್ಕೆ ಶುರುವಾದ ಗಲಾಟೆ. ಮಾತಿಗೆ ಮಾತು ಬೆಳೆದು ಗಣೇಶ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಕೊಂದು ಎಸ್ಕೇಪ್
ಇನ್ನು ಸ್ಥಳದಲ್ಲೇ ಗಣೇಶ್ ಶವ ಬಿಟ್ಟು ಆರೋಪಿಗಳು ಪರಾರಿಯಾಗಿದ್ದು, ಮೃತದೇಹದ ತಲೆ ಮತ್ತು ಕುತ್ತಿಗೆ ಭಾಗವನ್ನು ಕಾಡು ಪ್ರಾಣಿಗಳು ಕಚ್ಚಿ ತಿಂದಿವೆ. ಶವ ಗಮನಿಸಿದ ಕರ್ತವ್ಯಕ್ಕೆ ತೆರಳಿದ್ದ ಅರಣ್ಯ ಸಿಬ್ಬಂದಿ ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲು
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೋಲೀಸ್ ಮತ್ತು SOCO ತಂಡ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ಇದನ್ನು ಓದಿ : ಧರ್ಮಸ್ಥಳ ಬುರುಡೆ ಕೇಸ್ – ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಅಸ್ಥಿಪಂಜರ FSL ಗೆ ರವಾನೆ




