ಅಕ್ಕನ ಮೇಲೆ ಕಣ್ಣು ಹಾಕಿದವನನ್ನ ಬರ್ಬರವಾಗಿ Murder.

ಅಕ್ಕನ ಮೇಲೆ ಕಣ್ಣು ಹಾಕಿದ ದೇವಸ್ಥಾನದ ಪೂಜಾರಿಯನ್ನು ಅಪ್ರಾಪ್ತ ಬಾಲಕ ಒಬ್ಬ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಈ ಒಂದು ಭೀಕರ ಕೊಲೆ ನೆಡೆದಿದೆ.
ಬೆಳಗಾವಿಯಲ್ಲಿ ಭೀಕರ ಮರ್ಡರ್
ರಾಜಾಪುರ ಗ್ರಾಮದ ಮಂಜುನಾಥ್ ಸುಭಾಷ್ ಎಣ್ಣಿ (23) ಭೀಕರವಾಗಿ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. 17 ವರ್ಷದ ಅಪ್ರಾಪ್ತ ಬಾಲಕನಿಂದ ಮಂಜುನಾಥ್ ಎಣ್ಣಿ ಕೊಲೆಯಾಗಿದೆ. ಹಲವು ವರ್ಷಗಳಿಂದ ಮಂಜುನಾಥ್ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಅಕ್ಕನ ತಂಟೆಗೆ ಬರದಂತೆ ಬಾಲಕ ಕೆಲವು ಬಾರಿ ಎಚ್ಚರಿಕೆ ಸಹ ನೀಡಿದ್ದ ಎನ್ನಲಾಗಿದೆ.
ಇದನ್ನು ನೋಡಿ : TUMAKURU | ಹೆತ್ತನಹಳ್ಳಿಯನ್ನ ಟೂರಿಸ್ಟ್ ಪ್ಲೇಸ್ ಮಾಡ್ತೀನಿ ಎಂದ ಶಾಸಕ ಸುರೇಶ್ ಗೌಡ
ಅಕ್ಕನ ಮೇಲೆ ಕಣ್ಣು ಹಾಕಿದವನನ್ನ ಹತ್ಯೆ
ಆದರೂ ಮಂಜುನಾಥ್ ಅಪ್ರಾಪ್ತೆಯ ತಂಟೆಗೆ ಹೋಗುತ್ತಿದ್ದ.ಅಕ್ಕನ ಮೇಲೆ ಕಣ್ಣು ಹಾಕಿದವನನ್ನು ಇದೀಗ ಬಾಲಕ ಭೀಕರವಾಗಿ Murder ಮಾಡಿದ್ದಾನೆ. ಚೂನಮ್ಮದೇವಿ ದೇವಸ್ಥಾನದ ಪೂಜಾರಿಯಾಗಿದ್ದ ಮಂಜುನಾಥ್, ದೇವಸ್ಥಾನದಲ್ಲಿ ಯಾರು ಇಲ್ಲದನ್ನು ನೋಡಿ ಮಂಜುನಾಥನನ್ನು ಬಾಲಕ ಕೊಲೆ ಮಾಡಿದ್ದಾನೆ.
ಇನ್ನು ಈ ಘಟನೆ ಬಗ್ಗೆ ರಾಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರ್ತಿದೆ.
ಇದನ್ನು ಓದಿ : ಶಬರಿಮಲೆ ಚಿನ್ನ ಕಳವು ಕೇಸ್ – 3 ರಾಜ್ಯದಲ್ಲಿ ED ಶೋಧ




