ಶಬರಿಮಲೆ ಅಯ್ಯಪ್ಪ ದೇಗುಲ ಚಿನ್ನ ಕಳವು ಪ್ರಕರಣ: ಬೆಂಗಳೂರು, ಬಳ್ಳಾರಿ ಸೇರಿ 21 ಕಡೆ ED ದಾಳಿ.

ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಹಣ ವರ್ಗಾವಣೆ ಆಗಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಇಂದು ಮೂರು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
21 ಸ್ಥಳಗಳಲ್ಲಿ ದಾಳಿ
ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ವಿವಿಧೆಡೆ ಸುಮಾರು 21 ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.
ಇದನ್ನು ಓದಿ : ಮಲಗಿದ್ದ ಭಕ್ತರ ಮೇಲೆ ಹರಿದ ಕಾರು – ಓರ್ವ ಭಕ್ತ ನಿಧನ

ರೊದ್ದಂ ಜುವೆಲ್ಲರ್ಸ್ ಅಂಗಡಿ ಮೇಲೆ ED ರೈಡ್
ಶಬರಿಮಲೆ ದೇಗುಲದ ಪ್ರಮುಖ ಅರ್ಚಕ ಉನ್ನಿಕೃಷ್ಣನ್ ಜತೆ ಸೇರಿ ಚಿನ್ನದ ದ್ವಾರ ನಿರ್ಮಿಸಿದವರು ಗೋವರ್ಧನ. ಹೀಗಾಗಿ, ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ಇವರ ಮಾಲೀಕತ್ವದ ರೊದ್ದಂ ಜುವೆಲ್ಲರ್ಸ್ ಅಂಗಡಿ ಮೇಲೆ ED ಅಧಿಕಾರಿಗಳು ಬೆಳಗ್ಗೆ ದಾಳಿ ನಡೆಸಿದರು. ಗೋವರ್ಧನ ಅವರ ಮನೆಯವರನ್ನು ಕರೆಸಿದ ಅಧಿಕಾರಿಗಳು, ಅಂಗಡಿಯ ಬಾಗಿಲು ತೆಗೆಸಿದರು. ಜುವೆಲ್ಲರಿಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಯನ್ನು ಕರೆಸಲಾಗಿದೆ.
ದಾಳಿ ಮಾಡಿ ಪರಿಶೀಲನೆ
ಇನ್ನು ಸಿಆರ್ಪಿಫ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇ.ಡಿ ಅಧಿಕಾರಿಗಳು ಬೆಂಗಳೂರಿನಿಂದ ಆಗಮಿಸಿರುವ ಮಾಹಿತಿ ದೊರೆತಿದೆ. ಗೋವರ್ಧನ ಅವರನ್ನು ಈಗಾಗಲೇ ಕೇರಳ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ತಿಂಗಳು ಕೂಡಾ ಎಸ್ಐಟಿ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು.

ಇದನ್ನು ನೋಡಿ : ದೊಡ್ಡೇರಿ ಗ್ರಾಮ ಪಂಚಾಯ್ತಿ ಸದಸ್ಯರ ಅವಧಿ ವಿಸ್ತರಿಸುವಂತೆ ಸದಸ್ಯ ಮನವಿ




