Mysuru : ಸುತ್ತೂರು ಜಾತ್ರೆಯಲ್ಲಿ ದುರಂತ.

ಮೈಸೂರು ಸುತ್ತೂರು ಜಾತ್ರೆಯಲ್ಲಿ ಮಲಗಿದ್ದ ಭಕ್ತರ ಮೇಲೆ ಅಪರಿಚಿತ ಕಾರು ಹರಿದು ಓರ್ವ ಭಕ್ತ ಪ್ರಾಣ ಕಳೆದುಕೊಂಡಿದ್ದಾನೆ. ಜಿಎಂ ಪ್ರದೀಪ್ ಕುಮಾರ್ (36) ಮೃತ ಭಕ್ತ.
ಭಕ್ತರ ಮೇಲೆ ಹರಿದ ಕಾರು
ಸುತ್ತೂರು ಸಮೀಪದ ಗಟ್ಟವಾಡಿ ಗ್ರಾಮದ ನಿವಾಸಿಯಾದ ಪ್ರದೀಪ್ ಕುಮಾರ್, ಸುತ್ತೂರು ದೇವಾಲಯದ ಬಳಿ ನಡೆದ ಪೌರಾಣಿಕ ನಾಟಕವನ್ನು ವೀಕ್ಷಿಸಿ ಗದ್ದಿಗೆ ಬಳಿ ವಿಶ್ರಾಂತಿ ಪಡೆಯಲು ಮಲಗಿದ್ದರು. ಇದೇ ವೇಳೆ ಅವರ ಜೊತೆಗಿದ್ದ ಗಟ್ಟವಾಡಿ ಗ್ರಾಮದ ರವಿ ಎಂಬ ಭಕ್ತ ಕೂಡ ಮಲಗಿದ್ದನು. ಗಾಢ ನಿದ್ರೆಯಲ್ಲಿದ್ದ ಇಬ್ಬರ ಭಕ್ತರ ತಲೆ ಮೇಲೆ ಅಪರಿಚಿತ ಕಾರು ಹರಿದು ಹೋಗಿದ್ದು, ಸ್ಥಳದಲ್ಲೇ ಪ್ರದೀಪ್ ಕುಮಾರ್ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನು ಓದಿ : ಸತತ ಐದನೇ ಗೆಲುವು – ಪ್ಲೇ-ಆಫ್ಗೆ ಅರ್ಹತೆ ಪಡೆದ ನಮ್ಮ RCB

JSS ಆಸ್ಪತ್ರೆಗೆ ದಾಖಲು
ಇನ್ನು ಗಂಭೀರವಾಗಿ ಗಾಯಗೊಂಡಿರುವ ರವಿಯನ್ನು ತಕ್ಷಣ ಮೈಸೂರಿನ JSS ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮೃತ ವ್ಯಕ್ತಿಯ ಶವವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಇಟ್ ಅಂಡ್ ರನ್ ಪ್ರಕರಣ ದಾಖಲು – Mysuru
ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ Hit And Run ಪ್ರಕರಣ ದಾಖಲಾಗಿದ್ದು, ಕೆಎ 03 ಸಿ 3498 ನಂಬರಿನ ಅಪರಿಚಿತ ಕಾರು ಅಪಘಾತ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕಾರು ಹಾಗೂ ಚಾಲಕನ ಪತ್ತೆಗೆ ಬಿಳಿಗೆರೆ ಪೊಲೀಸರು ಬಲೆ ಬೀಸಿದ್ದಾರೆ.

ಪೊಲೀಸ್ ಠಾಣೆ ಮುಂದೆ ಆಕ್ರೋಶ
ಘಟನೆಯ ವಿರುದ್ಧ ನೊಂದ ಕುಟುಂಬಸ್ಥರು ಹಾಗೂ ಗಟ್ಟವಾಡಿ ಗ್ರಾಮದ ಗ್ರಾಮಸ್ಥರು ಬಿಳಿಗೆರೆ ಪೊಲೀಸ್ ಠಾಣೆ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯ ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಇದನ್ನು ನೋಡಿ : PARAMESHWAR | ರಾಮಚಂದ್ರರಾವ್ ಸಸ್ಪೆಂಡ್ ಬೆನ್ನಲ್ಲೆ ಜಿ.ಪರಮೇಶ್ವರ್ ಸ್ಫೋಟಕ ಹೇಳಿಕೆ




