ಗುಜರಾತ್ ವಿರುದ್ಧ 61 ರನ್ಗಳ ಭರ್ಜರಿ ಜಯ – ಪ್ಲೇ ಆಫ್ ಪ್ರವೇಶಿಸಿದ RCB.

ವಡೋದರಾದಲ್ಲಿ ನಡೆದ ಮಹಿಳಾ WPL 2026ರ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸುಲಭ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ RCB ಸತತ ಐದು ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದಿದೆ.
ಅದ್ಭುತ ಬ್ಯಾಟಿಂಗ್ ಪ್ರದರ್ಶನ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ಗಳನ್ನು ಕಲೆಹಾಕಿತು. ತಂಡದ ಪರ ಗೌತಮಿ ನಾಯ್ಕ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ 73 ರನ್ ಗಳಿಸಿದರು. ಸ್ಮೃತಿ ಮಂದಾನ 26 ರನ್ ಸೇರಿಸಿದರೆ, ರಿಚಾ ಘೋಷ್ ಮೂರು ಸಿಕ್ಸರ್ಗಳೊಂದಿಗೆ 27 ರನ್ಗಳ ಕೊಡುಗೆ ನೀಡಿದರು.
ಇದನ್ನು ಓದಿ : ರಾಸಲೀಲೆ ವಿಡಿಯೋ ಪ್ರಕರಣ – DGP ರಾಮಚಂದ್ರ ರಾವ್ ಅಮಾನತು

61 ರನ್ಗಳ ಭಾರೀ ಅಂತರದಿಂದ ಸೋಲು
179 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ ತಂಡವನ್ನು ಆರ್ಸಿಬಿ ಬೌಲರ್ಗಳು ಸಂಪೂರ್ಣವಾಗಿ ಕಟ್ಟಿ ಹಾಕಿದರು. ಸಾಂಘಿಕ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ತಂಡ 61 ರನ್ಗಳ ಭಾರೀ ಅಂತರದಿಂದ ಸೋಲೊಪ್ಪಿಕೊಂಡಿತು. ಆರ್ಸಿಬಿ ಪರ ಸಯಾಲಿ 3 ವಿಕೆಟ್ ಕಬಳಿಸಿ ಮಿಂಚಿದರೆ, ನದಿನೆ 2 ವಿಕೆಟ್ ಪಡೆದರು. ಇನ್ನು ಲಾರೆನ್ ಬೆಲ್, ಶ್ರೇಯಾಂಕ ಪಾಟೀಲ್ ಹಾಗೂ ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕೈಜೋಡಿಸಿದರು.
ಪಾಯಿಂಟ್ಸ್ ಟೇಬಲ್ನಲ್ಲಿRCB ಅಗ್ರಸ್ಥಾನ
ಈ ಗೆಲುವಿನೊಂದಿಗೆ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಐದು ಪಂದ್ಯಗಳಲ್ಲಿ ಐದು ಗೆಲುವುಗಳೊಂದಿಗೆ 10 ಅಂಕ ಗಳಿಸಿರುವ ಆರ್ಸಿಬಿ ಮೊದಲ ಸ್ಥಾನದಲ್ಲಿದ್ದರೆ, ಐದು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಮುಂಬೈ ನಾಲ್ಕು ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಇನ್ನು UP ವಾರಿಯರ್ಸ್, ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿವೆ.

ಇದನ್ನು ನೋಡಿ : ಹಿಂದೂಗಳ ಭಾವನೆಗೆ ದಕ್ಕೆ ಆರೋಪ; ರಿಂಕು ಸಿಂಗ್ ವಿರುದ್ಧ ಬಿತ್ತು ಕೇಸ್..!




