Dharmasthala ಬುರುಡೆ ರಹಸ್ಯ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲೆಗುಡ್ಡದಲ್ಲಿ ಸಿಕ್ಕಂತ 7 ಅಸ್ಥಿಪಂಜರಗಳ್ನು ಎಸ್ಐಟಿ ಅಧಿಕಾರಿಗಳು SFL ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
FSL ಪರೀಕ್ಷೆಗೆ ರವಾನೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ Dharmasthala ಗ್ರಾಮದ ಸಮೀಪದ ಬಂಗ್ಲೆಗುಡ್ಡ ಅರಣ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 7 ಮಾನವನ ಅಸ್ಥಿಪಂಜರಗಳು ಪತ್ತೆಯಾಗಿದ್ದು, FSLಪರೀಕ್ಷೆಗೆ ರವಾನೆ ಮಾಡಲಾಗಿದೆ.
ಇದನ್ನು ಓದಿ : Raghu ತೂಕದಲ್ಲಿ ಇಷ್ಟೊಂದು ಬದಲಾವಣೆನಾ? ಫ್ಯಾನ್ಸ್ ಶಾಕ್

ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆ
ಬುರುಡೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಎಸ್ಐಟಿ ತಂಡ, ಬಂಗ್ಲೆಗುಡ್ಡೆ ಅರಣ್ಯದಲ್ಲಿ ಉತ್ಖನನ ಕೈಗೊಂಡಿತ್ತು. ಸೆ.17 ರಂದು 5 ಅಸ್ಥಿಪಂಜರ, ಸೆ.18 ರಂದು 2 ಅಸ್ಥಿಪಂಜರ ಪತ್ತೆಯಾಗಿತ್ತು. ಎಲ್ಲವೂ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿತ್ತು. ಈ ಅಸ್ತಿಗಳನ್ನ ಬೆಂಗಳೂರು ಎಫ್ಎಸ್ಎಲ್ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.
ವರದಿಯ ಮೇಲೆ ಎಲ್ಲರ ಕಣ್ಣು
ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಹೆಚ್ಚಿನ ತನಿಖೆಗಾಗಿ ಬೆಂಗಳೂರಿನ ಮಡಿವಾಳದಲ್ಲಿರುವ ಎಫ್ಎಸ್ಎಲ್ ಕೇಂದ್ರಕ್ಕೆ ಅಸ್ಥಿಪಂಜರಗಳ ರವಾನೆ ಮಾಡಲಾಗಿದೆ. ಇನ್ನು ಈ ಅಸ್ಥಿ ಪಂಜರಗಳನ್ನು ಪರೀಕ್ಷೆ ನಡೆಸಿದ ನಂತ್ರ ಬರುವಂತ ವರದಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಇದನ್ನು ನೋಡಿ : BREAKING : ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಯಾತ್ರಿಕ ಚಿರತೆ ದಾಳಿಗೆ ಬಲಿ : ತಾಳಬೆಟ್ಟದ ಕಂದಕದಲ್ಲಿ ಶವ ಪತ್ತೆ.!




