Sirsi – ಸಿದ್ದಾಪುರ ಮುಖ್ಯರಸ್ತೆಯ ಕನ್ನಳ್ಳಿ ಚೆಕ್ಪೋಸ್ಟ್ ಬಳಿ ಟ್ರ್ಯಾಕ್ಟರ್ ಡಿಕ್ಕಿಯಿಂದ ಜನಗಣತಿ ಕಾರ್ಯಕ್ಕೆ ತೆರಳುತ್ತಿದ್ದ ಶಿಕ್ಷಕಿ ಪೂರ್ಣಿಮಾ ಭಟ್ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ.

ಕಾರವಾರ: ಜನಗಣತಿ ಕಾರ್ಯಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಸ್ಕೂಟಿಯಲ್ಲಿ ತೆರಳುತ್ತಿದ್ದ ಶಿಕ್ಷಕಿ ಟ್ರ್ಯಾಕ್ಟರ್ ಡಿಕ್ಕಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ Sirsi -ಸಿದ್ದಾಪುರ ಮುಖ್ಯರಸ್ತೆಯ ಕನ್ನಳ್ಳಿ (ಮಳವತ್ತಿ) ಚೆಕ್ಪೋಸ್ಟ್ ಬಳಿ ಸಂಭವಿಸಿದೆ.
ಮೃತ ಶಿಕ್ಷಕಿ ವಿವರ
ಅಪಘಾತದಲ್ಲಿ ಮೃತಪಟ್ಟ ಶಿಕ್ಷಕಿಯನ್ನು ಬಸವಗಿರಿ, ಕೊಲಸಿರ್ಸಿ ಕ್ರಾಸ್ ನಿವಾಸಿ ಪೂರ್ಣಿಮಾ ಗಣಪತಿ ಭಟ್ (47) ಎಂದು ಗುರುತಿಸಲಾಗಿದೆ.
ಅವರು ಸಿದ್ದಾಪುರ ಪಟ್ಟಣದ ಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (HPS Hosur) ನಲ್ಲಿ ಸಹ-ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು..
MUST READ : Dina Bhavishya : ದಿನ ಭವಿಷ್ಯ 15 ಮೇ 2026..

ಅಪಘಾತ ಹೇಗೆ ಸಂಭವಿಸಿತು
ಮಾಹಿತಿಯ ಪ್ರಕಾರ, ಶಿರಸಿ ಕಡೆಯಿಂದ ಸಿದ್ದಾಪುರದತ್ತ ಕಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್, ಪೂರ್ಣಿಮಾ ಭಟ್ ಅವರು ಚಲಾಯಿಸುತ್ತಿದ್ದ ಸ್ಕೂಟರ್ಗೆ ಡಿಕ್ಕಿಯಾಗಿದೆ.
ಟ್ರ್ಯಾಕ್ಟರ್ ಅನ್ನು ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣವೆಂದು ಶಂಕಿಸಲಾಗಿದೆ. ಡಿಕ್ಕಿಯ ತೀವ್ರತೆಗೆ ಶಿಕ್ಷಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತಕ್ಕೆ ಕಾರಣವಾದ ಟ್ರ್ಯಾಕ್ಟರ್ ಚಾಲಕ ಆಕಾಶ ಮಂಜಪ್ಪ ಬಾಲಣ್ಣನವರ್ (ಹಾವೇರಿ ಮೂಲ) ವಿರುದ್ಧ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
MUST WATCH : ಡಿಕೆಶಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ವಿಶೇಷವಾಗಿ ಆಶೀರ್ವಾದಿಸಿದ ಪುರೋಹಿತರು | DKS BIRTHDAY SPECIAL |




