Gilli ಅಣ್ಣ ನನ್ನ ಫೇವರಿಟ್, ಅವನೇ ಗೆಲ್ತಾನೆ: ಬಿಗ್ ಬಾಸ್ 11 ವಿನ್ನರ್ ಹನುಮಂತ ಮಾತು.

ಬಿಗ್ ಬಾಸ್ ಸೀಸನ್-12ರಲ್ಲಿ ಗಿಲ್ಲಿ ನಟ ಗೆಲ್ಲೋದು ಖಾಯಂ. ಗಿಲ್ಲಿ ಅಣ್ಣ ನನ್ನ ಫೇವರಿಟ್. ಅವರೇ ವಿನ್ನರ್ ಆಗೋದಾಗಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಭವಿಷ್ಯ ನುಡಿದಿದ್ದಾರೆ.
ಎದೆಯಲ್ಲಿ ಢವಢವ ಶುರುವಾಗಿದೆ
ಹಾವೇರಿಯ ಸವಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹನುಮಂತು, ಯಾರನ್ನು ವಿನ್ನರ್ ಎಂಬುದಾಗಿ ಘೋಷಣೆ ಮಾಡುತ್ತಾರೆ ಅಂತ ಎದೆಯಲ್ಲಿ ಢವಢವ ಶುರುವಾಗಿದೆ. ಈ ಬಾರಿ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗಿದೆ ಎಂದರು.
ಇದನ್ನು ಓದಿ : Sira|ಅಮಾವಾಸ್ಯೆ ಹಿನ್ನೆಲೆ ಮನೆ ಮುಂದೆ ವಾಮಾಚಾರ
ಈ ಬಾರಿ ಅತೀ ಹೆಚ್ಚು ವೋಟಿಂಗ್
ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದಭಾವ ಇರೋದಿಲ್ಲ. “ಈ ಬಾರಿ ಅತೀ ಹೆಚ್ಚು ವೋಟಿಂಗ್ ನಡೆದಿದೆ. ಗಿಲ್ಲಿ ನಟ ಅವರಿಗೆ ಹೆಚ್ಚು ವೋಟ್ ಬಂದಿದೆ. ನಾನು ಸಹ ಅವರಿಗೆ ವೋಟಿಂಗ್ ಮಾಡಿದ್ದೇನೆ,” ಎಂದು ಅವರು ಹೇಳಿದರು.
ನನ್ನ ಫೇವರಿಟ್ ಗಿಲ್ಲಿ ಅಣ್ಣ
ಬಿಗ್ ಬಾಸ್ ಸೀಸನ್ 12ರಲ್ಲಿ ಗಿಲ್ಲಿ ಅಣ್ಣ ಗೆಲ್ಲುತ್ತಾನೆ. ನಾನು ಮತ್ತು Gilli ಭರ್ಜರಿ ಬ್ಯಾಚುಲರ್, ಕಾಮಿಡಿ ಕಿಲಾಡಿ ಶೋ ಮಾಡಿದ್ದೀವಿ. ಗಿಲ್ಲಿ ಅಣ್ಣನಿಗೆ ಹೆಚ್ಚು ವೋಟ್ ಬಂದಿರೋದು. ನನ್ನ ಫೇವರಿಟ್ ಗಿಲ್ಲಿ ಅಣ್ಣ. ಎಲ್ಲರಿಗೂ ಆಲ್ ದಿ ಬೆಸ್ಟ್ ಅಂತ ಹೇಳಿದರು.
ಇದನ್ನು ನೋಡಿ : ಮದುವೆ ಮಾಡಿಸಿದ ಪೂಜಾರಿಗೆ ಲಾಂಗು ಮಚ್ಚು ತೋರ್ಸಿದ್ರಂತೆ ರಾಜೀವ್ ಗೌಡ




