Sira : 21ನೇ ಶತಮಾನಕ್ಕೆ ಬಂದಿದ್ರು ಕೂಡ ಮೌಡ್ಯತೆಯಲ್ಲಿ ಜನರು ಮುಳುಗಿದ್ದಾರೆ.

21ನೇ ಶತಮಾನಕ್ಕೆ ಬಂದಿದ್ರು ಕೂಡ ಮೌಡ್ಯತೆಯಲ್ಲಿ ಜನರು ಮುಳುಗಿದ್ದಾರೆ. ಅಲ್ಲಲ್ಲಿ ವಾಮಾಚಾರ ಮಾಡಿದ ಪ್ರಕರಣಗಳು ಬೆಳಕಿಗೆ ಬರ್ತಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಜನರು ಬೆಚ್ಚಿ ಬೀಳುತ್ತಿದ್ದಾರೆ.
ಮನೆ ಮುಂದೆಯೇ ವಾಮಾಚಾರ
ಇಂದು ಅಮಾವಾಸ್ಯೆ ಇದ್ದು ಮನೆಯ ಬಾಗಿಲ ಮುಂದೆ ಕಿಡಿಗೇಡಿಗಳು ನಿನ್ನೆ ರಾತ್ರಿ ಕಿಡಿಗೇಡಿಗಳು ವಾಮಾಚಾರ ಮಾಡಿ ಹೋಗಿದ್ದು, ಮನೆ ಬಾಗಿಲು ತೆಗೆದ ಕುಟುಂಬಸ್ಥರಿಗೆ ಶಾಕ್ ಎದುರಾಗಿರೋ ಘಟನೆ Sira ದಲ್ಲಿ ನಡೆದಿದೆ.
ಇದನ್ನು ಓದಿ : ಕೆಂಪೇಗೌಡ ಏರ್ಪೋರ್ಟ್ಗೆ ಬಾಂಬ್ ದಾಳಿ ಬೆದರಿಕೆ – ಆತಂಕ ಸೃಷ್ಟಿ

Sira ದಲ್ಲಿ ಕೃತ್ಯ
ಶಿರಾ ನಗರದ ಜ್ಯೋತಿ ನಗರದಲ್ಲಿ APMC ಮಾಜಿ ಅದ್ಯಕ್ಷರ ಮನೆ ಮುಂದೆ ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ಮಡಿಕೆ, ಕುಡಿಕೆ, ನಿಂಬೆ ಹಣ್ಣು, ಕುಂಕುಮ, ಅರಿಶಿಣದಿಂದ ವಾಮಾಚಾರ ಮಾಡಿ ಹೋಗಿದ್ದಾರೆ. ಇಂದು ಬೆಳಗಿನ ಜಾವ ಮನೆಯ ಬಾಗಿಲು ತೆಗೆದಾಗ ಕೃತ್ಯ ಬೆಳಕಿಗೆ ಬಂದಿದೆ.
ಸೋಷಿಯಲ್ ಮಿಡಿಯಾದಲ್ಲಿ ವೈರಲ್
ಎಪಿಎಂಸಿ ಮಾಜಿ ಮನೆ ಅದ್ಯಕ್ಷ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಅಲ್ದೇ ಎಪಿಎಂಸಿ ಮಾಜಿ ಅಧ್ಯಕ್ಷರ ಮನೆಯ ಸುತ್ತ- ಮುತ್ತ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ವಾಮಾಚಾರ ಮಾಡಿರೋ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇದನ್ನು ನೋಡಿ : ತಂದೆ ಜಾಗ ನೀಡಿದ್ದ ಆಸ್ಪತ್ರೆಯಲ್ಲೇ ಮಗನ ದುರಂತ ಅಂತ್ಯ- ಆಂಬುಲೆನ್ಸ್ ಸಿಗದೇ ನರಳಿ ಸಾವನ್ನಪ್ಪಿದ ರೋಗಿ




