Bidar ನಲ್ಲಿ ಗಾಳಿಪಟ ಹಾರಿಸುವಾಗ ಕಟ್ಟಡದ ಮೇಲಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.

Bidar ಜಿಲ್ಲೆಯ ಹುಮನಾಬಾದ್ ತಾಲೂಕಿನ ವಾಂಜರಿ ಬಡಾವಣೆಯಲ್ಲಿ ಗಾಳಿಪಟ ಹಾರಿಸುವ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಮೃತ ಯುವಕನನ್ನು ವಾಂಜರಿ ಬಡಾವಣೆಯ ನಿವಾಸಿ ಶಶಿಕುಮಾರ ಶಿವಾನಂದ ಡೊಂಗರಗಾಂವ (19) ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಬಿಗ್ ಬಾಸ್ ಮುಕ್ತಾಯದ ಬಗ್ಗೆ ಕಿಚ್ಚ ಟ್ವೀಟ್ – Sudeep ಹೇಳಿದ್ದೇನು?
ಗಾಳಿಪಟ ಹಾರಿಸುವಾಗ ಕಟ್ಟಡದ ಮೇಲಿಂದ ಬಿದ್ದು ಸಾವು
ಗೆಳೆಯರು ಸೇರಿಕೊಂಡು ಗಾಳಿಪಟ ಹಾರಿಸಲು ಬಡಾವಣೆಯ ಎಸ್.ಎಚ್.ಪಾಟೀಲ್ ಐಟಿಐ ಕಾಲೇಜ್ ಪಕ್ಕದ ಕಟ್ಟಡದ ಶೆಡ್ ಮೇಲೆ ಹತ್ತಿದ್ದರು. ಶಿವಾನಂದ ಗಾಳಿಪಟ ಹಿಡಿಯಲು ಯತ್ನಿಸುತ್ತಿದಾಗ ಆಯತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಪ್ರಕರಣ ದಾಖಲು
ಮೃತ ಶಶಿಕುಮಾರ ಪ್ಯಾರಾ ಮೆಡಿಕಲ್ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕೆ ಕಾಯುತ್ತಿದ್ದ ಎಂದು ತಿಳಿದುಬಂದಿದೆ. ಇನನು ತಂದೆ 8 ವರ್ಷದ ಹಿಂದೆ ಮೃತಪಟ್ಟಿದ್ದರು. ತಾಯಿ ಸಾವಿತ್ರಮ್ಮ ಕೂಲಿ ಕೆಲಸ ಕೆಲಸ ಮಾಡಿ ಮೂವರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನು ನೋಡಿ : ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಭುಗಿಲೆದ್ದ ಆಕ್ರೋಶ




