ಬಿಗ್ ಬಾಸ್ ಸೀಸನ್ 12ರ ಮುಕ್ತಾಯದ ಬಗ್ಗೆ Sudeep ಟ್ವೀಟ್ ಮಾಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ವಿನ್ನರ್ ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿ ತೀವ್ರವಾಗಿದೆ. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಫಿನಾಲೆ ಕುರಿತು ಶೋ ನಿರೂಪಕ ಕಿಚ್ಚ ಸುದೀಪ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಪ್ರತಿಯೊಬ್ಬ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು
ಬಿಗ್ ಬಾಸ್ ರಿಯಾಲಿಟಿ ಶೋವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದಾರೆ. ಫಿನಾಲೆಯ ದಿನವೇ ಹಂಚಿಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಇದನ್ನು ಓದಿ : ಹರ್ಮನ್ಪ್ರೀತ್ ಕೌರ್ ದಾಖಲೆ ಮುರಿದ Smriti Mandhana
ಕಿಚ್ಚ ಸುದೀಪ್ ಹೇಳಿದ್ದೇನು?
ಈ ಗಮನಾರ್ಹ ಸೀಸನ್, ಅದ್ಭುತದ ಅಸಾಧಾರಣ ಪ್ರಯಾಣವಾಗಿದ್ದು, ಪ್ರತಿಯೊಬ್ಬ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಎಲ್ಲಾ ಸ್ಪರ್ಧಿಗಳಿಗೆ, ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆ ಜೊತೆಗೆ ಅದ್ಭುತ ಯಶಸ್ಸಿಗೆ ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಬಿಕೆ ಇಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಇದನ್ನು ನೋಡಿ : ಜಿಲ್ಲೆಯಲ್ಲಿ ಮತ್ತೆ ಜೋರಾಗುತ್ತಾ ಹೇಮೆ ಕಿಚ್ಚು ಶಾಸಕ ಎಂ.ಟಿ ಕೃಷ್ಣಪ್ಪ ಏನಂದ್ರು ಗೊತ್ತಾ..?




