ಶತಕ ವಂಚಿತರಾದರೂ ಹರ್ಮನ್ಪ್ರೀತ್ ಕೌರ್ ದಾಖಲೆ ಮುರಿದ RCB ಯ Smriti Mandhana.

ಶನಿವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ WPL 2026ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕಿ ಸ್ಮೃತಿ ಮಂಧಾನ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಸ್ಮೃತಿ 61 ಎಸೆತಗಳಲ್ಲಿ 96 ರನ್ ಗಳಿಸಿ ತಂಡಕ್ಕೆ ಬಲಿಷ್ಠ ಮೊತ್ತ ಕಟ್ಟಿಕೊಟ್ಟರು.
ಗರಿಷ್ಠ ಮೊತ್ತ ಗಳಿಸಿದ ಭಾರತೀಯ ಆಟಗಾರ್ತಿ
ಈ ಇನಿಂಗ್ಸ್ ಮೂಲಕ Smriti Mandhana ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ವೈಯಕ್ತಿಕವಾಗಿ ಗರಿಷ್ಠ ಮೊತ್ತ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ಧಾರೆ. ಇನ್ನು ಈ ದಾಖಲೆ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಹೆಸರಿನಲ್ಲಿತ್ತು.
ಇದನ್ನು ಓದಿ : ಫಿನಾಲೆಗೂ ಮುನ್ನ ಬಿಗ್ ಶಾಕ್ – Bigg Boss ತಂಡಕ್ಕೆ ನೋಟಿಸ್ ನೀಡಿದ್ಯಾರು?

ಹೊಸ ಇತಿಹಾಸ
ಡಬ್ಲ್ಯೂಪಿಎಲ್ 2024ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ 48 ಎಸೆತಗಳಲ್ಲಿ 95 ರನ್ (ಅಜೇಯ) ಬಾರಿಸಿದ್ದರು. ಆದರೆ ಸ್ಮೃತಿ ಮಂಧಾನ ಅವರ 96 ರನ್ಗಳ ಇನಿಂಗ್ಸ್ ಆ ದಾಖಲೆಯನ್ನು ಮುರಿದು, ಹೊಸ ಇತಿಹಾಸ ನಿರ್ಮಿಸಿದೆ.
ಜಂಟಿ ದಾಖಲೆ ಯಾರ ಹೆಸರಿನಲ್ಲಿದೆ?
ಇನ್ನು ಡಬ್ಲ್ಯೂಪಿಎಲ್ನಲ್ಲಿ ಒಟ್ಟಾರೆಯಾಗಿ (ಭಾರತೀಯ ಮತ್ತು ವಿದೇಶಿ ಆಟಗಾರ್ತಿಯರನ್ನು ಸೇರಿಸಿ) ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿದ ಜಂಟಿ ದಾಖಲೆ ಆರ್ಸಿಬಿಯ ಮಾಜಿ ಆಟಗಾರ್ತಿ ಸೋಫಿ ಡಿವೈನ್ ಮತ್ತು ಜಾರ್ಜಿಯಾ ವೋಲ್ ಅವರ ಹೆಸರಿನಲ್ಲಿದೆ. ಈ ಇಬ್ಬರೂ ಆಟಗಾರ್ತಿಯರು ತಲಾ 99 ರನ್ ಬಾರಿಸಿದ್ದಾರೆ.

ಇದನ್ನು ನೋಡಿ : CM SIDDARAMAIAH | ಬಳ್ಳಾರಿ ಗಲಭೆ ಪ್ರಕರಣದ ಬಗ್ಗೆ ಸಿಎಂ ಸಿದ್ದು ಏನಂದ್ರು




