Haveri ಯಲ್ಲಿ ಕೃಷಿಯಲ್ಲಿ ನಷ್ಟ ಅನುಭವಿಸಿ ನೇಣಿಗೆ ಶರಣಾದ ರೈತ!

ಸಾಲ ಭಾದೆ ತಾಳರರದೇ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ Haveri ಜಿಲ್ಲೆ ಹಾನಗಲ್ ತಾಲೂಕಿನ ಹನಮನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸುಮಾರು 3,00,000/ ಲಕ್ಷ ಸಾಲ
ತಾಲೂಕಿನ ಹನಮನಕೊಪ್ಪ ಗ್ರಾಮದ 42 ವರ್ಷ ಉಮೇಶ ನಾಗಪ್ಪ ಹಂಚಿನಮನಿ ಮೃತ ರೈತನಾಗಿದ್ದು, ಇವರು ವ್ಯೆವಸಾಯ ಮಾಡಲು ಗೆಜ್ಜಿಹಳ್ಳಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ 80.000/-ರೂ ಬೆಳೆ ಸಾಲ, ಮತ್ತು ಪತ್ನಿಯ ಹೆಸರಲ್ಲಿ ಧರ್ಮಸ್ಥಳ ಸಂಘದಲ್ಲಿ ಸುಮಾರು 1,50,000/- ರೂಗಳ ಸಾಲ ಸೇರಿದಂತೆ ಗ್ರಾಮದಲ್ಲಿ ಸುಮಾರು 3,00,000/ ಲಕ್ಷ ರೂಗಳ ಕೈಗಡ ಸಾಲವನ್ನು ಪಡೆದಿದ್ದರು ಎನ್ನಲಾಗಿದೆ.
ಇದನ್ನು ಓದಿ : ಸೌರವ್ ಗಂಗೂಲಿ ದಾಖಲೆ ಹಿಂದಿಕ್ಕಿದ Virat Kohli

ಕೃಷಿಯಲ್ಲಿ ನಷ್ಟ ಅನುಭವಿಸಿ ನೇಣಿಗೆ ಶರಣು
ತಾವು ಬೆಳೆದ ಬೆಳೆಗಳು ಸರಿಯಾಗಿ ಬಾರದೇ, ಕೃಷಿಯಲ್ಲಿ ನಷ್ಟ ಅನುಭವಿಸಿ, ಮನನೊಂದು ಇಂದು ಮುಂಜಾನೆ 6. ಗಂಟೆ ಸುಮಾರಿನಲ್ಲಿ ಗ್ರಾಮದ ಹೊರವಲಯದ ಬೇವಿನ ಮರಕ್ಕೆ ಉರುಳು ಹಾಕಿಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : 16 ಸೀಟರ್ ಜೀಪ್ನಲ್ಲಿ 60 ಮಂದಿ ಪ್ರಯಾಣ: ವಿಡಿಯೊ ವೈರಲ್




