ಕಿವೀಸ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ವಿಶೇಷ ದಾಖಲೆ ಬರೆದ Virat Kohli.

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ Virat Kohli 309ನೇ ಏಕದಿನ ಪಂದ್ಯ ಆಡಿದರು.
ಈ ಮೂಲಕ ಅವರು ಸೌರವ್ ಗಂಗೂಲಿ (308 ಪಂದ್ಯಗಳು) ದಾಖಲೆಯನ್ನು ಮುರಿದು ಭಾರತ ಪರ 5ನೇ ಅತಿ ಹೆಚ್ಚು ಏಕದಿನ ಪಂದ್ಯಗಳು ಆಡಿದ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ದೇಶದ ಅತಿ ಹೆಚ್ಚು ಏಕದಿನ ಪಂದ್ಯ ಆಡಿದ ದಾಖಲೆ ಇನ್ನೂ ದಿಗ್ಗಜ ಸಚಿನ್ ತೆಂಡೂಲ್ಕರ್ (463) ಅವರ ಹೆಸರಲ್ಲಿಯೇ ಉಳಿದಿದೆ.

ಭಾರತ ಪರ ಅತಿ ಹೆಚ್ಚು ಏಕದಿನ ಪಂದ್ಯಗಳು
ಸಚಿನ್ ತೆಂಡೂಲ್ಕರ್- 463
ಎಂ.ಎಸ್. ಧೋನಿ- 347
ರಾಹುಲ್ ದ್ರಾವಿಡ್- 340
ಎಂ. ಅಜರುದ್ದೀನ್- 334
ವಿರಾಟ್ ಕೊಹ್ಲಿ- 309*
ಸೌರವ್ ಗಂಗೂಲಿ- 308
ವಿಶ್ವದ 3ನೇ ಬ್ಯಾಟರ್ – Virat Kohli
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 25 ರನ್ ಗಳಿಸಿದರೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 28,000 ರನ್ ಪೂರೈಸಿದ ವಿಶ್ವದ 3ನೇ ಬ್ಯಾಟರ್ ಆಗಿ ಇರುತ್ತಾರೆ. 42 ರನ್ ಗಳಿಸಿದರೆ, ಶ್ರೀಲಂಕಾ ಕ್ರಿಕೆಟರ್ ಕುಮಾರ್ ಸಂಗಕ್ಕರನ (28,016 ರನ್) ದಾಖಲೆಯನ್ನು ಮುರಿದು 2ನೇ ಸ್ಥಾನ ಪಡೆಯಲಿದ್ದಾರೆ.

ಟಾಸ್ ಗೆದ್ದ ಭಾರತ
ಭಾರತ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. 2023 ರ ಏಕದಿನ ವಿಶ್ವಕಪ್ ಫೈನಲ್ನೊಂದಿಗೆ ಪ್ರಾರಂಭವಾದ 20 ಸತತ ಟಾಸ್ ಸೋಲು ಕಂಡಿತ್ತು. ಆದರೆ ವರ್ಷದ ಮೊದಲ ಸರಣಿಯಲ್ಲಿಯೇ ಟಾಸ್ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.

ಇದನ್ನು ನೋಡಿ : ಕೆಲಸಕ್ಕೆಂದು ಚಿಕ್ಕಪ್ಪನ ಮನೆಗೆ ಬಂದಿದ್ದ ಯುವತಿ SUI*IDE – ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




