Virat Kohli ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ವಿಶೇಷವೆಂದರೆ, ಈ ದಾಖಲೆ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದು ಸಾಧಿಸಿರುವುದು.
ಒಂದೇ ಒಂದು ರನ್ನೊಂದಿಗೆ ವರ್ಲ್ಡ್ ರೆಕಾರ್ಡ್
ಬೆಂಗಳೂರಿನ COE ಮೈದಾನದಲ್ಲಿ ನಡೆದ ಆಂಧ್ರ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ Virat Kohli, ಮೊದಲ ರನ್ ಗಳಿಸಿದ ಕ್ಷಣದಲ್ಲೇ ಇತಿಹಾಸ ನಿರ್ಮಿಸಿದರು. ಈ ಪಂದ್ಯಕ್ಕೂ ಮೊದಲು ಲಿಸ್ಟ್ ಎ (ಏಕದಿನ) ಕ್ರಿಕೆಟ್ನಲ್ಲಿ 15,999 ರನ್ಗಳನ್ನು ಹೊಂದಿದ್ದ ಕೊಹ್ಲಿ, ಒಂದೇ ರನ್ ಗಳಿಸುವ ಮೂಲಕ 16,000 ರನ್ಗಳ ಮೈಲಿಗಲ್ಲು ತಲುಪಿದರು.
ಇದನ್ನು ಓದಿ : ಇಂದು ಕೂಡ ಹೆಚ್ಚಿದ ಚಿನ್ನ, ಬೆಳ್ಳಿ ಬೆಲೆ

ಅತೀ ವೇಗವಾಗಿ 16 ಸಾವಿರ ರನ್ಗಳನ್ನು ಗಳಿಸಿದ ಬ್ಯಾಟರ್
ಇದರೊಂದಿಗೆ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 16 ಸಾವಿರ ರನ್ಗಳನ್ನು ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಕೊಹ್ಲಿಯ ಪಾಲಾಯಿತು. ಇದುವರೆಗೆ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದು, ಅವರು 391 ಇನಿಂಗ್ಸ್ಗಳಲ್ಲಿ 16,000 ರನ್ಗಳನ್ನು ಪೂರೈಸಿದ್ದರು.
330 ಇನಿಂಗ್ಸ್ಗಳಲ್ಲೇ ಸಾಧನೆ ಮಾಡಿದ Virat Kohli
ಆದರೆ ವಿರಾಟ್ ಕೊಹ್ಲಿ ಕೇವಲ 330 ಇನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 16,000 ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನು ನೋಡಿ : ಚಿತ್ರದುರ್ಗ ಬಸ್ ಅಪಘಾತ: ಪ್ರಧಾನಿ ಮೋದಿ ಸಂತಾಪ, 2 ಲಕ್ಷ ರೂ. ಪರಿಹಾರ ಘೋಷಣೆ




