ಮೂರನೇ ವಾರದ ಬಳಿಕವೂ ಹಲವು ಚಿತ್ರಮಂದಿರಗಳಲ್ಲಿ Mark ಸಿನಿಮಾದ ಶೋಗಳು ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿವೆ.

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆಯ್ತು. 2025 ರಲ್ಲಿ ಏಕೈಕ ಸುದೀಪ್ ಸಿನಿಮಾ ‘ಮಾರ್ಕ್’. ಅದರ ಜೊತೆಗೆ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಹ ಬಿಡುಗಡೆ ಆಗಿತ್ತು. ಈ ಎರಡೂ ಸಿನಿಮಾಗಳ ಬಿಡುಗಡೆಗೆ ಕೆಲ ದಿನಗಳ ಮುಂಚೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಸಹ ತೆರೆಗೆ ಬಂದಿತ್ತು.
ಸಿನಿಮಾ ಗಳಿಸಿದೆಷ್ಟು?
ಇಷ್ಟೆಲ್ಲ ಸ್ಪರ್ಧೆ, ಬೆದರಿಕೆಗಳ ಮಧ್ಯವೂ ‘ಮಾರ್ಕ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಇದೀಗ ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು, ಸಿನಿಮಾ ಗಳಿಸಿರುವುದೆಷ್ಟು?
ಇದನ್ನು ಓದಿ : Ration Card ಬಳಕೆದಾರರಿಗೆ ಮತ್ತೊಂದು ಗುಡ್ನ್ಯೂಸ್
Mark ಉತ್ತಮ ಪ್ರದರ್ಶನ
ಸಿನಿಮಾ ಬಿಡುಗಡೆಯಾಗುತ್ತಲೇ ಪೈರಸಿ ಸಮಸ್ಯೆಯನ್ನು ಎದುರಿಸಿದ್ದರೂ, ಬಾಕ್ಸ್ಆಫೀಸ್ನಲ್ಲಿ Mark ಉತ್ತಮ ಪ್ರದರ್ಶನ ನೀಡಿದೆ. ಈಗ, ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಒಟ್ಟು 51 ಕೋಟಿ 30 ಲಕ್ಷ ರೂ. ಗಳಿಕೆ ಸಾಧಿಸಿದೆ. ಮೂರನೇ ವಾರದಲ್ಲಿಯೂ ಬೆಂಗಳೂರು ಸೇರಿದಂತೆ ಅನೇಕ ಚಿತ್ರಮಂದಿರಗಳಲ್ಲಿ ತುಂಬಿದ ಶೋಗಳು ನಡೆಯುತ್ತಿದ್ದು, ಸಿನಿಮಾ ಮೆಚ್ಚುಗೆ ಪಡೆದಿದೆ.

ಇದನ್ನು ನೋಡಿ : SIDDARAMAIAHರನ್ನ ದೇವರಾಜು ಅರಸುರಿಗೆ ಹೋಲಿಕೆ ಮಾಡೋದು ಸರಿಯಲ್ಲ
ವಿಜಯ್ ಕಾರ್ತಿಕೇಯ್ ನಿರ್ದೇಶನದ Mark
ಇನ್ನು ವಿಜಯ್ ಕಾರ್ತಿಕೇಯ್ ನಿರ್ದೇಶನದ ಈ ಚಿತ್ರಕ್ಕೆ ಸತ್ಯಜ್ಯೋತಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಹಣಕಾಸು ನೀಡಿವೆ. ವಿಶೇಷವಾಗಿ, ವಿತರಣೆಯಲ್ಲಿ ಸುದೀಪ್ ಪುತ್ರಿ ಸಾನ್ವಿ ಸಹ ಪಾಲ್ಗೊಂಡಿದ್ದಾರೆ.
ಬಿಗ್ ಬಾಸ್ ಅಂತ್ಯ
ಸುದೀಪ್ ಅವರು ಪ್ರಸ್ತುತ ಬಿಗ್ಬಾಸ್ ನಿರೂಪಣೆ ಮಾಡುತ್ತಿದ್ದು, ಮುಂದಿನ ವಾರ ಅದು ಸಹ ಅಂತ್ಯಗೊಳ್ಳಲಿದೆ. ಪ್ರಸ್ತುತ ಸುದೀಪ್ ಅವರು ‘ಬಿಲ್ಲ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಸ್ಕೇಲ್ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ ಇದಾಗಿದ್ದು, ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




