ಕರ್ನಾಟಕದಲ್ಲಿ ಇ-ಮೇಲ್ Bomb Threat ಗಳು ಹೆಚ್ಚುತ್ತಿವೆ.

ಇತ್ತೀಚೆಗೆ ರಾಜ್ಯದ ವಿವಿಧ ಕೋರ್ಟ್ಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಬಾಂಬ್ ಸ್ಫೋಟದ ಹುಸಿ ಬೆದರಿಕೆ ಇ-ಮೇಲ್ಗಳು ಬರುತ್ತಿರುವ ಬೆನ್ನಲ್ಲೇ, ಇದೀಗ ಬೆಂಗಳೂರು ಹೆಬ್ಬಾಳದ ಕೇಂದ್ರೀಯ ವಿದ್ಯಾಲಯಕ್ಕೆ Bomb Threat ಇ-ಮೇಲ್ ಬಂದಿದೆ.
ದೂರು ದಾಖಲು
ಹೌದು, ವಿದ್ಯಾಲಯದ ಅಧಿಕೃತ ಇ-ಮೇಲ್ ಐಡಿಗೆ 3 ಆರ್ಡಿಎಕ್ಸ್ (RDX) ಇಟ್ಟಿದ್ದೇವೆ ಎಂಬ ಸಂದೇಶವನ್ನು ಕಿಡಿಗೇಡಿಗಳು ರವಾನಿಸಿದ್ದಾರೆ. ಈ ಕುರಿತು ಕಾಲೇಜಿನ ಪ್ರಾಂಶುಪಾಲ ಪಿ.ಎಂ. ಪ್ರಕಾಶ್ ಅವರು ತಕ್ಷಣವೇ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನು ಓದಿ : ಮೈದಾನದಲ್ಲಿಯೇ ಕುಸಿದು ಬಿದ್ದು ಯುವ Cricketer ಸಾವು

ಹುಸಿ ಬಾಂಬ್ ಬೆದರಿಕೆ
ದೂರು ಸ್ವೀಕರಿಸಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ
ಇತ್ತೀಚೆಗೆ ಮೈಸೂರು, ಧಾರವಾಡ ಹೈಕೋರ್ಟ್, ಬಾಗಲಕೋಟ, ಗದಗ, ಹಾಸನ ಜಿಲ್ಲಾ ನ್ಯಾಯಾಲಯಗಳು ಹಾಗೂ ಬೆಂಗಳೂರು ಕೋರಮಂಗಲದ ಪಾಸ್ಪೋರ್ಟ್ ಕಚೇರಿಗೆ ಕೂಡ ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್ಗಳು ಬಂದಿದ್ದವು. ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ ತಂಡಗಳು ಪರಿಶೀಲನೆ ನಡೆಸಿದರೂ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿ ರಲಿಲ್ಲ.

ತೀವ್ರ ತನಿಖೆ
ಸತತವಾಗಿ ಬರುತ್ತಿರುವ ಇಂತಹ ಹುಸಿ ಬೆದರಿಕೆ ಇ-ಮೇಲ್ಗಳು ಭದ್ರತಾ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದ್ದು, ಕಿಡಿಗೇಡಿ ಗಳನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : ನೊಂದಿದ್ದ ಉದ್ಯೋಗಿಗೆ ಸಾಂತ್ವನ ಹೇಳಿ, ಬಾಳ ಸಂಗಾತಿಯಾಗಲು ನಿರ್ಧರಿಸಿದ ಲೇಡಿ ಬಾಸ್ ! ಗುಜರಾತ್ ನಲ್ಲಿ ವಿಚಿತ್ರ ಲವ್ ಸ್ಟೋರಿ




