ಭಾರತದ ಮಾಜಿ ಕ್ರಿಕೆಟಿಗ Ambati Rayudu ಮತ್ತೊಮ್ಮೆ ತಂದೆಯಾಗಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಮತ್ತೊಮ್ಮೆ ತಂದೆಯಾಗಿದ್ದಾರೆ. ಅವರ ಪತ್ನಿ ವಿದ್ಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭಸುದ್ದಿಯನ್ನು Ambati Rayudu ಸ್ವತಃ Instagram ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್
ರಾಯುಡು ಅವರು ಪತ್ನಿ ವಿದ್ಯಾ ಮತ್ತು ನವಜಾತ ಶಿಶುವಿನೊಂದಿಗೆ ಇರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, ಗಂಡು ಮಗುವಿನ ಆಗಮನದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಇದ್ದು, ಇದು ಅವರ ಮೂರನೇ ಮಗುವಾಗಿದೆ.
ಇದನ್ನು ಓದಿ : Silicon City ಯಲ್ಲಿ ಘೋರ ದುರಂತ – ಉಸಿರುಗಟ್ಟಿ ಟೆಕ್ಕಿ ದುರಂತ ಅಂತ್ಯ

3ನೇ ಮಗುವಿಗೆ ತಂದೆಯಾದ ರಾಯುಡು
ಅಂಬಟಿ ರಾಯುಡು ಮತ್ತು ವಿದ್ಯಾ 2009ರಲ್ಲಿ ವಿವಾಹವಾಗಿದ್ದರು. ಜುಲೈ 2020ರಲ್ಲಿ ಈ ದಂಪತಿಗೆ ಮೊದಲ ಹೆಣ್ಣು ಮಗು ಜನಿಸಿದ್ದು, ಆಕೆಗೆ ವಿವಿಯಾ ಎಂದು ಹೆಸರು ಇಟ್ಟಿದ್ದಾರೆ. ನಂತರ 2023ರಲ್ಲಿ ಮತ್ತೊಮ್ಮೆ ಹೆಣ್ಣು ಮಗು ಜನಿಸಿತ್ತು. ಇದೀಗ 40ನೇ ವಯಸ್ಸಿನಲ್ಲಿ ಅಂಬಟಿ ರಾಯುಡು ಮೂರನೇ ಬಾರಿಗೆ ತಂದೆಯಾಗಿದ್ದು, ಈ ಬಾರಿ ಗಂಡು ಮಗು ಕುಟುಂಬಕ್ಕೆ ಸೇರಿದೆ.
ಕುಟುಂಬದ ವಿಚಾರಗಳನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ
ಸಾಮಾನ್ಯವಾಗಿ ತಮ್ಮ ಖಾಸಗಿ ಜೀವನವನ್ನು ಸಾರ್ವಜನಿಕರಿಂದ ದೂರವಿಟ್ಟಿರುವ ರಾಯುಡು, ಕುಟುಂಬದ ವಿಚಾರಗಳನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ಆದರೆ ಮಗುವಿನ ಜನನದ ಸಂತಸವನ್ನು ಈ ಬಾರಿ ತಮ್ಮ ಅಭಿಮಾನಿ ಗಳೊಂದಿಗೆ ಹಂಚಿಕೊಳ್ಳಲು ಮುಂದಾಗಿದ್ದಾರೆ.

ರಾಯುಡು ಅವರ ಈ ಪೋಸ್ಟ್ಗೆ ಸಹ ಕ್ರಿಕೆಟಿಗರು, ಮಾಜಿ ಆಟಗಾರರು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು Social Media ಗಳಲ್ಲಿ ಶುಭಾಶಯಗಳ ತಿಳಿಸಿದ್ದಾರೆ.
ಇದನ್ನು ನೋಡಿ : ಖರ್ಚಿಗೆ ಅಮ್ಮ ಹಣ ಕೊಡಲಿಲ್ಲ ಅಂತ ಬೆಂಕಿ ಹಚ್ಚಿಕೊಂಡ ಮಗ..!




