ತಿಧಿ ಸಿನಿಮಾದಲ್ಲಿ Century Gowda ಪಾತ್ರ ಮಾಡಿದ್ದ ಸಿಂಗ್ರಿಗೌಡ ಕೂಡ ನಿಧನರಾಗಿದ್ದಾರೆ.

ತಿಥಿ ಸಿನಿಮಾದ ಮೂಲಕ ಖ್ಯಾತಿ ಪಡೆದಿದ್ದ ಹಿರಿಯ ನಟ ಸೆಂಚುರಿ ಗೌಡ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗ್ರೆಗೌಡ ಅಲಿಯಾಸ್ ಸೆಂಚುರಿ ಗೌಡ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ದುಃಖದ ಛಾಯೆ ಆವರಿಸಿದೆ.
ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದ ನಿವಾಸದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. 100 ವರ್ಷಕ್ಕೂ ಅಧಿಕ ವಯಸ್ಸು ದಾಟಿದ್ದ ಅವರು, ತಿಥಿ ಸಿನಿಮಾದಲ್ಲಿ ತಮ್ಮ ವಯಸ್ಸಿನಲ್ಲೇ ‘ಸೆಂಚುರಿ ಗೌಡ’ ಎಂಬ ಪಾತ್ರದ ಹೆಸರಿನಿಂದಲೇ ಜನಮನ ಗೆದ್ದಿದ್ದರು. ಸಹಜ ಅಭಿನಯ ಮತ್ತು ಗ್ರಾಮೀಣ ಶೈಲಿಯ ಮೂಲಕ ಅವರು ಮನೆಮಾತಾಗಿದ್ದರು.ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಕೊನೆಯುಸಿರೆಳೆದಿದ್ದು, ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನು ಓದಿ : ದೇವರಾಯನದುರ್ಗದಲ್ಲಿ ಕೋತಿಗಳ ಮಾರಣಹೋಮ..!?

ಹಲವು ಚಿತ್ರಗಳಲ್ಲಿ ಅಭಿನಯ
ತಿಥಿ ಸಿನಿಮಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಸೆಂಚುರಿ ಗೌಡ ಅವರ ಪಾತ್ರ ಚಿತ್ರಕ್ಕೆ ವಿಶೇಷ ಕಳೆ ನೀಡಿತ್ತು. ಹಾಲು ತಪ್ಪ, ಚಿನ್ನದ ಗೊಂಬೆ, ಹಳ್ಳಿ ಪಂಚಾಯ್ತಿ, ತರ್ಲೆ ವಿಲೇಜ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
ಗಡ್ಡಪ್ಪ ಸಾವಿನ ಬೆನ್ನಲ್ಲೇ ಸೆಂಚುರಿ ಗೌಡ ನಿಧನ
ಕಳೆದ ಕೆಲವೇ ತಿಂಗಳ ಹಿಂದೆ ತಿಥಿ ಚಿತ್ರದ ಮತ್ತೊಬ್ಬ ಖ್ಯಾತ ನಟ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಅವರೂ ನಿಧನರಾಗಿದ್ದರು. ಇವರಿಬ್ಬರೂ ತಮ್ಮ ಸಹಜ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇನ್ನು Century Gowda ಅವರ ನಿಧನದಿಂದ ಕನ್ನಡ ಚಿತ್ರರಂಗ ಒಂದು ಅಪರೂಪದ ಗ್ರಾಮೀಣ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ.

ಇದನ್ನು ನೋಡಿ : ಅಮೆರಿಕ | ಮಾಜಿ ಬಾಯ್ಫ್ರೆಂಡ್ ಅಪಾರ್ಟ್ಮೆಂಟ್ಲ್ಲಿ ಭಾರತ ಮೂಲದ ಯುವತಿ ಶವ ಪತ್ತೆ




