Tumakuru : ಪ್ರಸಿದ್ಧ ಪ್ರವಾಸಿ ತಾಣದ ಬಳಿ 11 ಕೋತಿಗಳು ಶವವಾಗಿ ಪತ್ತೆಯಾಗಿದ್ದು, ಕೇವಲ ಅರಣ್ಯ ಇಲಾಖೆಯನ್ನು ಮಾತ್ರವಲ್ಲದೆ ಪರಿಸರ ಪ್ರೇಮಿಗಳನ್ನೂ ಆತಂಕಕ್ಕೆ ತಳ್ಳಿದೆ.

Tumakuru : ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ತುಮಕೂರಿನ ದೇವರಾಯನದುರ್ಗದ ಮೀಸಲು ಅರಣ್ಯ ಪ್ರದೇಶದ ನಾಮದ ಚಿಲುಮೆ ಬಳಿ ಏಕಕಾಲಕ್ಕೆ 11 ಕೋತಿಗಳ ಶವಗಳು ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.
ದೇವರಾಯನದುರ್ಗದಲ್ಲಿ 11 ಕೋತಿಗಳ ಮಾರಣ ಹೋಮ
ಶುಕ್ರವಾರ ಸಂಜೆ ಸ್ಥಳೀಯರ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದು, ಐದು ಮಂಗಗಳು ಹಾಗೂ ಎರಡು ಹನುಮಾನ್ ಲಂಗೂರ್ಗಳು ಸೇರಿದಂತೆ ಒಟ್ಟು 11 ಕೋತಿಗಳ ಮೃತದೇಹಗಳು ಪತ್ತೆಯಾಗಿವೆ. ಕೋತಿಗಳು ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದೆ.
ಮೃತ ಕೋತಿಗಳ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಹೀಗಾಗಿ ವಿಷಪೂರಿತ ಆಹಾರ ಅಥವಾ ನೀರು ಸೇವಿಸಿ ಕೋತಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನ FSL ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ : ಜೋಳದ ಚಿಗುರು ಸಿಪ್ಪೆ ಸೇವಿಸಿ 50ಕ್ಕೂ ಹೆಚ್ಚು ಕುರಿಗಳು ಸಾವು

ಅಧಿಕಾರಿಗಳ ಜೊತೆ ಡಿಸಿ ಶುಭ ಕಲ್ಯಾಣ್ ದಿಢೀರ್ ಸಭೆ
ಇನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಇಂದು ಅರಣ್ಯ ಅಧಿಕಾರಿಗಳು, ಪಶುಪಾಲನೆ ಹಾಗೂ ಪಶುವೈಧ್ಯ ಸೇವಾ ಇಲಾಖೆಯ ಅಧಿಕಾರಿಗಳೋಂದಿಗೆ ತುರ್ತು ಸಭೆ ನಡೆಸಿ ಸಂಪೂರ್ಣ ಮಾಹಿತಿ ಪಡೆದಿದ್ದು, FSL ವರದಿ ಬಂದ ಬಳಿಕವೇ ಕೋತಿಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿನ ಸುತ್ತ ಹಲವು ಅನುಮಾನ
ಇತ್ತೀಚಿನ ದಿನಗಳಲ್ಲಿ ದೇವರಾಯನದುರ್ಗ ಸುತ್ತಮುತ್ತ ಜನವಸತಿಗಳು ಹೆಚ್ಚುತ್ತಿದ್ದು, ಅರಣ್ಯಕ್ಕೆ ತೀರಾ ಹತ್ತಿರವಾಗ್ತಿದೆ. ಹೀಗಾಗಿ ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾಗಿ ವನ್ಯಜೀವಿಗಳು ಗ್ರಾಮಗಳತ್ತ ಲಗ್ಗೆ ಇಡ್ತಿವೆ. ಇದ್ರಿಂದ ಬೆಳೆ ನಷ್ಟ ಮತ್ತು ಮನೆಗಳಿಗೆ ತೊಂದ್ರೆಯಾಗ್ತಿದ್ದು, ಇದೇ ಕೋತಿಗಳ ಸಾವಿಗೆ ಕಾರಣವಾಗಿದ್ಯಾ ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ.

MUST WATCH : ನಿಧಿಗಾಗಿ ಮಗು ಬಲಿ ಕೊಡಲು ಸಿದ್ದವಾದ ದಂಪತಿ – ಅಧಿಕಾರಿಗಳು ಬಂದೊಡನೆ ಫುಲ್ ಡ್ರಾಮಾ




