Pavagada ದಲ್ಲಿ 50ಕ್ಕೂ ಹೆಚ್ಚು ಕುರಿಗಳು ಸಾವು.

ತುಮಕೂರು ಜಿಲ್ಲೆ Pavagada ತಾಲೂಕಿನ ಪೆನ್ನೊಬನಹಳ್ಳಿ ಗ್ರಾಮದಲ್ಲಿ ಜೋಳದ ಸಿಪ್ಪೆ ಸೇವಿಸಿ ಸುಮಾರು 50 ಕುರಿಗಳು ದಾರುಣವಾಗಿ ಸಾವನ್ನಪ್ಪಿದ್ದು, ರೈತ ಮಹಿಳೆ ಕಂಗಾಲಾಗಿದ್ದಾಳೆ. ಪೆನ್ನೊಬನಹಳ್ಳಿ ಗ್ರಾಮದ ಜಂಪಕ್ಕ ಎಂಬುವವರಿಗೆ ಸೇರಿದ 200ಕ್ಕೂ ಹೆಚ್ಚು ಕುರಿಗಳ ಹಿಂಡುಗಳು ಇದ್ದು, ಜೋಳದ ಸಿಪ್ಪೆಯನ್ನು ಸೇವಿಸಿವೆ. ಇದರ ಪರಿಣಾಮ 200 ಕುರಿಗಳ ಹಿಂಡಿನಲ್ಲಿ 50 ಕುರಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
50ಕ್ಕೂ ಹೆಚ್ಚು ಕುರಿಗಳು ದಾರುಣವಾಗಿ ಸಾವು
ಪ್ರತಿ ದಿನದಂತೆ ಮೊನ್ನೆ ಕುರಿಗಳನ್ನು ಮೇವಿಗಾಗಿ ಹೊಲದತ್ತ ಕರೆದೊಯ್ಯಲಾಗಿತ್ತು. ಹುಲ್ಲು ಮೇಯುತ್ತಿದ್ದ ಕುರಿಗಳು ಏಕಾಏಕಿ ಕುಸಿದು ಬಿದ್ದು, ಕೆಲವೇ ಕ್ಷಣಗಳಲ್ಲಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದರಿಂದ ಕುರಿಗಾಹಿ ರೈತ ಮಹಿಳೆಗೆ ಆಘಾತವಾಗಿದ್ದು, ಕಂಗಾಲಾಗಿದ್ದಾರೆ. ಒಂದಲ್ಲಾ ಎರಡಲ್ಲ 50 ಕುರಿಗಳು ಸಾವನ್ನಪ್ಪಿದ್ದು ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದ್ದು ರೈತ ಮಹಿಳೆ ಕಂಗಾಲಾಗಿದ್ದಾರೆ.
ಇದನ್ನು ಓದಿ : ಕಾಲೇಜುಗಳಲ್ಲಿ ಮತ್ತೆ ಎಲೆಕ್ಷನ್ ಅಬ್ಬರ?

ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ
ಇನ್ನು ಘಟನಾ ಸ್ಥಳಕ್ಕೆ ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುರಿಗಳು ಜೋಳದ ಚಿಗುರಿನ ಸಿಪ್ಪೆ ಸೇವಿಸುವುದರಿಂದ ಸಾವನ್ನಪ್ಪಿವೆ ಎಂದು ಹೇಳಲಾಗಿದೆ. ಅಲ್ಲದೇ ಜೋಳದ ಸಿಪ್ಪೆಯಲ್ಲಿ ಸೈನೆಡ್ ಅಂಶ ಇರೋದ್ರಿಂದ ವಿಷವಾಗಿ ಪರಿಣಮಿಸಿ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿಸಲಾಗಿದೆ.
ಅಲ್ಲದೇ ಕುರಿಗಳ ಮಾದರಿ ಸ್ಯಾಂಪಲ್ಗಳನ್ನು ಟೆಸ್ಟಿಂಗ್ಗೆ ಕಳುಹಿಸಲಾಗಿದ್ದು, ವರದಿ ಬಳಿಕ ಕುರಿಗಳ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಕುಟುಂಬಕ್ಕೆ ಆಧಾರವಾಗಿದ್ದ ಕುರಿಗಳ ಸಾವಿಗೆ ಕುಟುಂಬ ಕಂಗಾಲಾಗಿದ್ದು, ಪರಿಹಾರಕ್ಕೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಇದನ್ನು ನೋಡಿ : ಸಸ್ಪೆಂಡ್ ಬೆನ್ನಲ್ಲೇ ಆತ್ಮ*ತ್ಯೆಗೆ ಯತ್ನಿಸಿದ್ರಾ ಬಳ್ಳಾರಿ SP ಪವನ್ ನೆಜ್ಜೂರ್?




