Student Election : 30 ವರ್ಷಗಳಿಂದ ಬ್ಯಾನ್ ಆಗಿದ್ದ ಸ್ಟೂಡೆಂಟ್ ಯೂನಿಯನ್ ಎಲೆಕ್ಷನ್ಗಳನ್ನು ಮತ್ತೆ ಆರಂಭಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ 30 ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘ ಚುನಾವಣೆಗಳು ಮತ್ತೆ ಆರಂಭವಾಗಲಿವೆ. ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದ್ದು, ವಿದ್ಯಾರ್ಥಿ ನಾಯಕತ್ವ ಬೆಳೆಸುವ ಉದ್ದೇಶವನ್ನು ಹೊರಹೊಮ್ಮಿಸಿದೆ.
ಯಾವಾಗ ವಿದ್ಯಾರ್ಥಿ ಚುನಾವಣೆಗಳನ್ನು ಸ್ಥಗಿತ ಮಾಡಲಾಗಿತ್ತು?
ಕಳೆದ ಬಾರಿ, ಅಂದರೆ 1996-97ರಲ್ಲಿ, ರಾಜ್ಯದ ಕಾಲೇಜುಗಳು ಮತ್ತು VV ಗಳಲ್ಲಿ ನಡೆದ ವಿದ್ಯಾರ್ಥಿ ಚುನಾವಣೆಯ ಸಂದರ್ಭ ದಲ್ಲಿ ಗಲಾಟೆ, ಹಿಂಸಾಚಾರ, ರೌಡಿ ಚಟುವಟಿಕೆಗಳು ಸಾಕಷ್ಟು ಚರ್ಚೆಗೆ ವಿಷಯವಾಗಿತ್ತು. ವಿಶೇಷವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ಉಂಟಾದ ಹಿಂಸಾಚಾರದಿಂದಾಗಿ ಸರ್ಕಾರವು ವಿದ್ಯಾರ್ಥಿ ಚುನಾವಣೆಗಳನ್ನು ಸ್ಥಗಿತಗೊಳಿಸಬೇಕಾಯಿತು.
ಇದನ್ನು ಓದಿ : ಬಾಂಗ್ಲಾ ಕ್ರಿಕೆಟರ್ Mustafizur Rahman IPL ನಿಂದ ಔಟ್?

ಕಟ್ಟುನಿಟ್ಟಿನ ಮಾರ್ಗಸೂಚಿ
ಈ ಬಾರಿ, ಶಿಕ್ಷಣ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿರುವ ಸರ್ಕಾರ, ಚುನಾವಣೆಯನ್ನು ಕಟ್ಟುನಿಟ್ಟಿನ ಮಾರ್ಗಸೂಚಿಗಳೊಂದಿಗೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತು ಭವಿಷ್ಯದ ನಾಯಕತ್ವವನ್ನು ರೂಪಿಸುವ ಉದ್ದೇಶದಿಂದ ನಡೆಸಲು ನಿರ್ಧರಿಸಿದೆ. ಜನವರಿ 13ರಂದು ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಮಹತ್ವದ ಸಭೆ ನಡೆಯಲಿದೆ.
30 ವರ್ಷಗಳ ಬಳಿಕ ಪುನಾರಾರಂಭ
ಆದರೆ, 30 ವರ್ಷಗಳ ಬಳಿಕ ಪುನರ್ಪ್ರಾರಂಭವಾಗುತ್ತಿರುವ ಈ ಚುನಾವಣೆಗಳು ಹಳೆಯ ದಿನಗಳಂತೆಯೇ ಗಲಾಟೆ, ಹಿಂಸಾಚಾರ ಅಥವಾ ರಾಜಕೀಯ ಸಂಘರ್ಷಗಳಿಗೆ ಆಹ್ವಾನ ಕೊಡಬಹುದೇ ಎಂಬ ಸವಾಲು ಇನ್ನೂ ಎದುರಲಿದೆ. ಸರ್ಕಾರವು ಈ ಬಾರಿ ಸಂಪೂರ್ಣ ಕಾರ್ಯನಿರ್ವಹಣಾ ನಿಯಮಾವಳಿಗಳೊಂದಿಗೆ ಚುನಾವಣೆಗಳನ್ನು ನಡೆಸಲು ತಯಾರಾಗಿದೆ.

Student Election, ಹಳೆಯ ಗಾಯಗಳನ್ನು ಮರುಕಳಿಸುವುದೋ, ಇಲ್ಲವೆ ಹೊಸ ನಾಯಕತ್ವವನ್ನು ಜನಿಸುವುದೋ ಎಂಬ ಪ್ರಶ್ನೆಗೆ ಉತ್ತರ ಕಾಲವೇ ನೀಡಲಿದೆ.
ಇದನ್ನು ನೋಡಿ : ಜೋಳದ ಚಿಗುರು ಸೇವಿಸಿ ಕ್ಷಣಾರ್ಧದಲ್ಲಿ 50ಕ್ಕೂ ಹೆಚ್ಚು ಕುರಿಗಳ ಸಾವು!




