Mustafizur Rahman IPL ನಿಂದ ಔಟ್? ಕೆಕೆಆರ್ಗೆ ಬಿಸಿಸಿಐ ಹೇಳಿದ್ದೇನು?

ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಂಗ್ಲಾದೇಶದ ವೇಗದ ಔಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ BCCI ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ವಿನಂತಿಸಿದೆ.
ಬದಲಿ ಆಟಗಾರನನ್ನು ಒದಗಿಸುತ್ತದೆ
ಇನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಪ್ರತಿಕ್ರಿಯಿಸಿ, ಬಿಸಿಸಿಐ ಐಪಿಎಲ್ ಫ್ರಾಂಚೈಸಿಯಾದ KKR Mustafizur Rahman ಅವರನ್ನು ತಮ್ಮ ತಂಡದಿಂದ ಬಿಡುಗಡೆ ಮಾಡುವಂತೆ ಸೂಚಿಸಿದೆ. ಅವರು ಬಿಡುಗಡೆಯಾದ ನಂತರ ಕೆಕೆಆರ್ನಿಂದ ಯಾವುದೇ ವಿನಂತಿ ಬಂದರೆ ಬಿಸಿಸಿಐ ಅದನ್ನು ಪರಿಗಣಿಸುತ್ತದೆ ಮತ್ತು ಬದಲಿ ಆಟಗಾರನನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ : ವಿಶ್ವದಾದ್ಯಂತ ಕೋಟಿ ಕೋಟಿ ರೂ. ಕಲೆಕ್ಷನ್ ಮಾಡಿದ Avatar 3

IPL ನಲ್ಲಿ ಬಾಂಗ್ಲಾದೇಶದ ಆಟಗಾರರು ಆಡಬಾರದು
ಇದು ಭಾರತ–ಬಾಂಗ್ಲಾದೇಶ ಸಂಬಂಧದಲ್ಲಿ ಉಂಟಾದ ಉದ್ವಿಗ್ನತೆಯ ಮಧ್ಯೆ ಬಂದಿದೆ. ಹಸೀನಾ ಸರ್ಕಾರ ಪತನದ ನಂತರ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಕುಗ್ಗಿದ್ದು, IPL ನಲ್ಲಿ ಬಾಂಗ್ಲಾದೇಶದ ಆಟಗಾರರು ಆಡಬಾರದು ಎಂಬ ಅಭಿಮಾನಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಬಿಸಿಸಿಐ ಮಧ್ಯಪ್ರವೇಶವಾಗಿದೆ.
₹9.20 ಕೋಟಿಗೆ KKR ಖರೀದಿ
ಇನ್ನು ಮುಂಬೈನಲ್ಲಿ ನಡೆದ ಡಿಸೆಂಬರ್ ಹರಾಜಿನಲ್ಲಿ ಮುಸ್ತಾಫಿಜುರ್ ಅವರನ್ನು ₹9.20 ಕೋಟಿಗೆ KKR ಖರೀದಿಸಿತ್ತು. ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾದೇಶಿ ಆಟಗಾರರಾಗಿದ್ದಾರೆ. ಮುಸ್ತಾಫಿಜುರ್ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಆಡಿದ್ದರು.

ಇದನ್ನು ನೋಡಿ : POST OFFICE ನ ಹಣ ವಂಚನೆ ಕೇಸ್ ಹಣ ಕಳೆದುಕೊಂಡಿದ್ದ ವೃದ್ದ ಮಹಿಳೆ ಸಾ*




