7700 ಕೋಟಿ ಹಣ ಗಳಿಸಿದ Avatar 3.

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ “ಅವತಾರ್ ಫೈರ್ ಅಂಡ್ ಆಶ್” (Avatar: Fire and Ash) ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ನೀಡಿದ್ದರೂ, ಜಾಗತಿಕ ಬಾಕ್ಸ್ ಆಫೀಸ್ ಸಾರ್ವಕಾಲಿಕ ಟಾಪ್ 50 ಪಟ್ಟಿಗೆ ಸೇರಲು ವಿಫಲವಾಗಿದೆ.
7,700 ಕೋಟಿ ಗಳಿಕೆ
ಇನ್ನು ಈ ಚಿತ್ರವು ಬಿಡುಗಡೆಯಾದ ಮೊದಲ ಎರಡು ವಾರಗಳಲ್ಲಿ ವಿಶ್ವದಾದ್ಯಂತ ಒಟ್ಟು ₹7,700 ಕೋಟಿ ಗಳಿಕೆ ಮಾಡಿದೆ. ಆದರೆ ಈ ಬೃಹತ್ ಕಲೆಕ್ಷನ್ ಹೊರತಾಗಿಯೂ, ಚಿತ್ರವು ಟಾಪ್ 10 ಅಥವಾ ಟಾಪ್ 50 ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ.
ಬಾಕ್ಸ್ ಆಫೀಸ್ ಮೋಜೊ ಇತ್ತೀಚಿನ ಟ್ರ್ಯಾಕಿಂಗ್ ವರದಿ ಪ್ರಕಾರ, “ಅವತಾರ್: ಫೈರ್ ಅಂಡ್ ಆಶ್” ಪ್ರಸ್ತುತ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ 100ನೇ ಸ್ಥಾನದಲ್ಲಿದೆ. ವರದಿ ಪ್ರಕಾರ, ಮುಂದಿನ ದಿನಗಳಲ್ಲಿ ಟಾಪ್ 10 ಪಟ್ಟಿಗೆ ಸೇರುವುದು ಈ ಚಿತ್ರಕ್ಕೆ ಕಷ್ಟಕರವಾಗಲಿದೆ ಎನ್ನಲಾಗಿದೆ.
ಇದನ್ನು ಓದಿ : ಮೃತ Mahantesh Bilagi ಪುತ್ರಿಗೆ ಸರ್ಕಾರಿ ಉದ್ಯೋಗ.! ಯಾವ ಹುದ್ದೆ?

ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಟಾಪ್ 5 ಚಿತ್ರಗಳು
ಸಾರ್ವಕಾಲಿಕ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆಯ ಪಟ್ಟಿಯಲ್ಲಿ:
- ಅವತಾರ್ (2009) – 2.9 ಬಿಲಿಯನ್ ಡಾಲರ್
- ಅವೆಂಜರ್ಸ್: ಎಂಡ್ಗೇಮ್ (2019)
- ಅವತಾರ್: ದಿ ವೇ ಆಫ್ ವಾಟರ್ (2022)
- ಟೈಟಾನಿಕ್
- ನೆ ಝಾ 2 (ಚೀನೀ ಚಿತ್ರ)
ಈ ಪಟ್ಟಿಯನ್ನು ಗಮನಿಸಿದರೆ, ಭಾರೀ ಬಜೆಟ್ ಹಾಗೂ ಅದ್ಭುತ ದೃಶ್ಯ ವೈಭವದ ಹೊರತಾಗಿಯೂ “ಅವತಾರ್: ಫೈರ್ ಅಂಡ್ ಆಶ್” ಗಳಿಕೆ ಮಟ್ಟ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಭಾರತದಲ್ಲಿ ಭರ್ಜರಿ ಪ್ರದರ್ಶನ
ಭಾರತದಲ್ಲಿ ಮಾತ್ರ ಈ ಚಿತ್ರ ಉತ್ತಮ ಪ್ರದರ್ಶನ ನೀಡಿದೆ.
- ಮೊದಲ ವಾರ: ₹109.5 ಕೋಟಿ
- 8ನೇ ದಿನ: ₹7.65 ಕೋಟಿ
- 9ನೇ ದಿನ: ₹10 ಕೋಟಿ
- 11 ಮತ್ತು 12ನೇ ದಿನ: ತಲಾ ₹5 ಕೋಟಿ
- 13ನೇ ದಿನ: ₹5.25 ಕೋಟಿ
- 14ನೇ ದಿನ: ₹6.9 ಕೋಟಿ
- 15ನೇ ದಿನ (ಬೆಳಿಗ್ಗೆ 9:10 IST ವರೆಗೆ): ₹2.48 ಕೋಟಿ
ಈ ಮೂಲಕ ಭಾರತದಲ್ಲಿ Avatar 3 ಚಿತ್ರವು ಒಟ್ಟು ಸುಮಾರು ₹162.68 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.

ಇದನ್ನು ನೋಡಿ : ಟೈರ್ ಬ್ಲ್ಯಾಸ್ಟ್ ಆಗಿ ಬುಲೆರೋ ಪಲ್ಟಿ- ಹೊಸ ವರ್ಷದ ದಿನವೇ ಮೂವರು ಮಸಣ ಸೇರಿದ್ರು




