Gadappa Death : ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ (Thithi fame Gaddappa) ನಿಧನರಾಗಿದ್ದಾರೆ.

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ (ಚನ್ನೇಗೌಡ, ವಯಸ್ಸು 89) ನಿಧನರಾದಿದ್ದಾರೆ. ವಯೋಸಹಜ ಅನಾರೋಗ್ಯಗಳಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ಇಂದು ತಮ್ಮ ಸ್ವಗ್ರಾಮ ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದಲ್ಲಿ ನಿಧನರಾದರು.
ಇದನ್ನು ಓದಿ : BBK 12 : ರಕ್ಷಿತಾಳನ್ನ ವಿಷಕಾರಿ ಎಂದ ರಾಶಿಕಾ
ಗಡ್ಡಪ್ಪಗೆ ಏನಾಗಿತ್ತು..?
ಗಡ್ಡಪ್ಪ ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ತಿಂಗಳು ಬಿದ್ದು ಸೊಂಟಗೆ ಗಾಯ ಆಗಿದ್ದು, ಆಪರೇಷನ್ ನಡೆಸಲಾಗಿತ್ತು. ಬಳಿಕವೂ ಚಿಕಿತ್ಸೆ ಫಲಕಾರಿಯಾಗದೇ ಅವರು ಜೀವನವನ್ನು ತ್ಯಜಿಸಿದರು. ಅವರ ಅಂತ್ಯಕ್ರಿಯೆ ಇಂದು ಸಂಜೆ ನೊದೆಕೊಪ್ಪಲು ಗ್ರಾಮದಲ್ಲೇ ನೆರವೇರಲಿದೆ ಎಂದು ಪುತ್ರಿ ಶೋಭಾ ಮಾಹಿತಿ ನೀಡಿದ್ದಾರೆ.
ತಿಥಿ ಸಿನಿಮಾದಿಂದ ಜನಪ್ರಿಯತೆ
ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ತಿಥಿ ಸಿನಿಮಾದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಜನಪ್ರಿಯರಾದ ಗಡ್ಡಪ್ಪ, ನಂತರ ತರ್ಲೆ ವಿಲೇಜ್, ಏನ್ ನಿನ್ ಪ್ರಾಬ್ಲಮ್ಮು, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿದಂತೆ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಗಡ್ಡಪ್ಪ ಅವರ ನಿಧನವು ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಶೋಕವಂತಾಗಿದೆ.
ಇದನ್ನು ನೋಡಿ : ದೆಹಲಿ ಕೇಸ್ನಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ.. ಇವತ್ತು ಪ್ರಧಾನಿ ಸಭೆ




