BBK : ಬಿಗ್ಬಾಸ್ನಲ್ಲಿ ಕ್ಯಾಪ್ಟನ್ ಮಾಳು ತಮ್ಮ ಸಿಕ್ಕ ವಿಶೇಷ ಅಧಿಕಾರದಲ್ಲಿ ಆರು ಮಂದಿಯನ್ನು ನಾಮಿನೇಟ್ ಮಾಡಿದ್ದಾರೆ.

BBK : ಬಿಗ್ಬಾಸ್ನ (Bigg Boss 12) ಈವಾರದ ಕ್ಯಾಪ್ಟನ್ ಮಾಳು ತಮ್ಮ ವಿಶೇಷ ಅಧಿಕಾರದಲ್ಲಿ ಆರು ಸದಸ್ಯರನ್ನು ನಾಮಿನೇಟ್ ಮಾಡಿದ್ದಾರೆ. ಅಶ್ವಿನಿ ಗೌಡ, ಸುಧೀ, ರಕ್ಷಿತಾ ಶೆಟ್ಟಿ, ಧ್ರುವಂತ್, ರಾಶಿಕಾ ಶೆಟ್ಟಿ ಹಾಗೂ ಜಾಹ್ನವಿಯನ್ನು ನಾಮಿನೇಟ್ ಮಾಡಿದ್ದಾರೆ.ನಾಮಿನೇಟ್ ಬೆನ್ನಲ್ಲೇ ಬಿಗ್ಬಾಸ್, ಎರಡು ತಂಡಗಳನ್ನಾಗಿ ಮಾಡಿದ್ದಾರೆ. ಒಂದು ನಾಮಿನೇಟ್ ತಂಡ, ಇನ್ನೊಂದು ಸೇವ್ ಆದ ತಂಡ.
ಸ್ಪೆಷಲ್ ಟಾಸ್ಕ್
ಮತ್ತೊಂದು ಸ್ಪೆಷಲ್ ಟಾಸ್ಕ್ನಲ್ಲಿ ನಾಮಿನೇಟ್ ತಂಡ ಗೆದ್ದುಕೊಂಡಿತ್ತು. ಗೆದ್ದ ರಿವಾರ್ಡ್ ಏನೆಂದರೆ, ನಾಮಿನೇಟ್ ತಂಡದ ಒಬ್ಬರನ್ನು ಸೇವ್ ಮಾಡಬಹುದು ಹಾಗೂ ಸೇವ್ ಆದ ತಂಡದ ಒಬ್ಬರನ್ನು ನಾಮಿನೇಟ್ ಮಾಡಬೇಕು.
ಇದನ್ನು ಓದಿ : ಬಾಲಿವುಡ್ ಹಿರಿಯ ನಟ Govinda ಆಸ್ಪತ್ರೆಗೆ ದಾಖಲು
ರಕ್ಷಿತಾ ವಿಷಕಾರಿ – ರಾಶಿಕಾ
ಈ ನಿಯಮದ ಹಿನ್ನೆಲೆ ನಾಮಿನೇಟ್ ತಂಡದಲ್ಲಿ ಗರಿಷ್ಠ ಗಲಾಟೆ ನಡೆದಿದೆ. ರಕ್ಷಿತಾ ಸುಧೀ ಸೇವ್ ಆಗಬೇಕು ಎಂದು ಬಯಸಿದ್ದಾರೆ. “ನಾಲ್ಕು ವಾರದಿಂದ ನಾಮಿನೇಟ್ ಆಗಿದ್ದೇನೆ, ಈ ಸಲ ನನಗೆ ಅವಕಾಶ ನೀಡಿ” ಎಂದು ರಾಶಿಕಾ ತಮ್ಮ ಹಕ್ಕಿಗಾಗಿ ಮನವಿ ಮಾಡಿದರು, ಇರಿಬ್ಬರ ನಡುವೆ ಗಲಾಟೆ ಹೆಚ್ಚಾಗಿದ್ದು, ರಕ್ಷಿತಾರನ್ನ ರಾಶಿಕಾ ವಿಷಕಾರಿ ಎಂದು ಕರೆದಿದ್ದಾರೆ, ಇನ್ನೂ ರಾಶಿಕಾ ಒಬ್ಬಳ ಮೇಲೆ ನಿರ್ಧಾರಕ್ಕೆ ಬಿಟ್ಟುಬಾರದು ಎಂದು ತೀವ್ರವಾಗಿ ಪ್ರತಿರೋಧಿಸಿದ್ದಾರೆ.
ಕೊನೆಯಲ್ಲಿ ಏನು ನಿರ್ಧಾರ ಮಾಡಿದರು, ಮತ್ತು ಕೊನೆಗೂ ಯಾರು ಸೇವ್ ಆಗುತ್ತಾರೆ ಮತ್ತು ಯಾರು ನಾಮಿನೇಟ್ ಆಗುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನು ನೋಡಿ : 2 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ




