Bollywood Actor Govinda : ಬಾಲಿವುಡ್ನ “ನಂಬರ್ ಒನ್” ಹೀರೋ ಗೋವಿಂದಾ ಅವರ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿದೆ.

ಬಾಲಿವುಡ್ನ “Number One” ಹೀರೋ ಗೋವಿಂದಾ (Govinda) ಅವರ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿದ್ದು, ಆಸ್ಪತ್ರೆ ಸೇರಿದ್ದಾರೆ.
ಜುಹುವಿನ ಆಸ್ಪತ್ರೆಗೆ ದಾಖಲು
ಅವರು ತಮ್ಮ ಮುಂಬೈ ನಿವಾಸದಲ್ಲಿ ಮಂಗಳವಾರ ರಾತ್ರಿ ಕುಸಿದು ಬಿದ್ದರು. ಅವರನ್ನು ಜುಹುವಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಚಾರವನ್ನು ಅವರ ಗೆಳೆಯ ಹಾಗೂ ಅವರ ಕಾನೂನು ಸಲಹೆಗಾರ ಲಲಿತ್ ಬಿಂದಲ್ ಖಚಿತಪಡಿಸಿದ್ದಾರೆ.
ಇದನ್ನು ಓದಿ : Chikkaballapura : ಪ್ರೀತಿಸಿ ಮದುವೆಯಾಗಿಬಿಟ್ರಾ ಅಣ್ಣ-ತಂಗಿ?
ಎಮರ್ಜೆನ್ಸಿ ವಾರ್ಡ್ನಲ್ಲಿ ಚಿಕಿತ್ಸೆ
ತಡರಾತ್ರಿ ಗೋವಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈ ಸಂದರ್ಭದಲ್ಲಿ ಎಮರ್ಜೆನ್ಸಿ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಹಲವು ಪರೀಕ್ಷೆಗಳನ್ನು ಮಾಡಲಾಗಿದ್ದು, ಅವುಗಳ ವರದಿ ಇನ್ನಷ್ಟೇ ಬರಬೇಕಿದೆ. ಗೋವಿಂದ ಪ್ರಜ್ಞೆತಪ್ಪಲು ಕಾರಣ ಇನ್ನೂ ಬಹಿರಂಗವಾಗಿಲ್ಲ. ಪರೀಕ್ಷಾ ವರದಿ ಬಂದ ಬಳಿಕ ಈ ವಿಚಾರ ರಿವೀಲ್ ಆಗಲಿದೆ.
ಧರ್ಮೇಂದ್ರ ಅವರ ಆರೋಗ್ಯ ವಿಚಾರಿಸಿ ಕುಟುಂಬಕ್ಕೆ ಧೈರ್ಯ
ಧರ್ಮೇಂದ್ರ ಅವರು ಆಸ್ಪತ್ರೆ ಸೇರಿದ್ದು, ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಗೋವಿಂದ ಅವರು ಧರ್ಮೇಂದ್ರ ದಾಖಲಾದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಅವರು ಗೋವಿಂದ ಅವರ ಆರೋಗ್ಯ ವಿಚಾರಿಸಿ, ಕುಟುಂಬದವರಿಗೆ ಧೈರ್ಯ ತುಂಬಿ ಬಂದಿದ್ದರು.
ಇದನ್ನು ನೋಡಿ : ದೆಹಲಿಯಲ್ಲಿ ಕಾರ್ ಬಾಂಬ್ ಸ್ಪೋಟ ಕೇಸ್ ಕೃತ್ಯವನ್ನು ಖಂಡಿಸಿದ ಮಾಜಿ ಸಚಿವರ ರಾಜಣ್ಣ




