Chikkaballapura News : ಪ್ರೀತಿಸಿ ಮದುವೆಯಾಗಿ ಮನಗೆ ಬಂದ ಜೋಡಿಗೆ ಯುವಕನ ಮನೆಯವರು ಶಾಕ್ ಕೊಟ್ಟಿದ್ದಾರೆ.

ದೇವಸ್ಥಾನದಲ್ಲಿ ತಾಳಿ ಕಟ್ಟಿಸಿಕೊಂಡು ಗಂಡನ ಮನೆಗೆ ಕಾಲಿಟ್ಟ ಯುವತಿಗೆ ಅತ್ತೆ-ಮಾವ ದೊಡ್ಡ ಶಾಕ್ ಕೊಟ್ಟಿದ್ದಾರೆ. ನೀವಿಬ್ಬರು ಅಣ್ಣ-ತಂಗಿ, ನಾವು ಈ ಮದುವೆ ಒಪ್ಪೋದಿಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಅತ್ತೆ-ಮಾವನ ಮಾತು ಕೇಳಿ ಕಂಗಾಲಾದ ಯುವತಿ ಆತ್ಮಹತ್ಯೆಗೆಯತ್ನಿಸಿದ್ದಾಳೆ ಎನ್ನಲಾಗಿದೆ.
ಮದುವೆಯಾದ ಜೋಡಿಗೆ ಬಿಗ್ ಶಾಕ್
ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಳ್ಳಿ ಗ್ರಾಮದಲ್ಲಿ ಅಚ್ಚರಿಯ ಘಟನೆ ನಡೆದಿದೆ. 23 ವರ್ಷದ ನಿತಿನ್ ಮತ್ತು 19 ವರ್ಷದ ಸುಕನ್ಯಾ ಎಂಬುವವರು ಪ್ರೀತಿಸಿ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿ ಸ್ಥಳೀಯ ದೇವಾಲಯದಲ್ಲಿ ಮದುವೆಯಾಗಿದ್ದಾರೆ.
ಇದನ್ನು ಓದಿ : ಭರ್ಜರಿ ಸೆಂಚುರಿ ಸಿಡಿಸಿದ Mayank Agarwal
ವರಸೆಯಲ್ಲಿ ಅಣ್ಣ-ತಂಗಿ!
ಆದರೆ ಯುವಕನ ಕುಟುಂಬದವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ನೀವಿಬ್ಬರು ವರಸೆಯಲ್ಲಿ ಅಣ್ಣ-ತಂಗಿ ಆಗಬೇಕು. ನಿಮ್ಮ ಮದುವೆ ತಪ್ಪು, ಇದು ಸರಿ ಅಲ್ಲ” ಎಂದು ಶಾಕ್ ಕೊಟ್ಟಿದ್ದಾರೆ
ಇದರಿಂದ ಮನನೊಂದ ಸುಕನ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಾಳೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಕನ್ಯಾ ಯುವಕನಿಗಾಗಿ ತೀವ್ರವಾಗಿ ಪಟ್ಡು ಹಿಡಿದಿದ್ದಾಳೆ ಎನ್ನಲಾಗಿದೆ. ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನು ನೋಡಿ : Meghana Raj: ಜೈಲರ್ 2 ಸಿನಿಮಾದಲ್ಲಿ ನಟಿ ಮೇಘನಾ ರಾಜ್? ತಮಿಳು ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ನಟಿ!




