Mayank Agarwal Century : ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಎಲೈಟ್ ಗ್ರೂಪ್-ಬಿ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ.

ಪುಣೆಯ MCA Stadium ನಲ್ಲಿ ನಡೆದರಣಜಿ ಟ್ರೋಫಿ (Ranji Trophy) ಎಲೈಟ್ ಗ್ರೂಪ್–ಬಿಪಂದ್ಯದಲ್ಲಿಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಭರ್ಜರಿ ಶತಕ (Century) ಸಿಡಿಸಿ ತಂಡವನ್ನು ಡ್ರಾಗೆ ಕೊಂಡೊಯ್ದಿದ್ದಾರೆ.
ಪ್ರಥಮ ಇನಿಂಗ್ಸ್ನಲ್ಲಿ 311 ರನ್
ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್ನಲ್ಲಿ 311 ರನ್ಗಳನ್ನು ಕಲೆಹಾಕಿ All Out ಆಯಿತು. ಅದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ತಂಡವು 300 ರನ್ಗಳಿಗೆ ಆಲೌಟ್ ಆಗಿ 11 ರನ್ಗಳ ಮುನ್ನಡೆ ಕರ್ನಾಟಕದ ಪಾಲಾಯಿತು.
ಇದನ್ನು ಓದಿ : Actor Dharmendra : ನಟ ಧರ್ಮೇಂದ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮಯಾಂಕ್ ಅಗರ್ವಾಲ್ ಭರ್ಜರಿ ಶತಕ
ಕರ್ನಾಟಕ ಪರ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ 35 ಓವರ್ಗಳಲ್ಲಿ 70 ರನ್ ನೀಡಿ 4 ವಿಕೆಟ್ಗಳನ್ನು ಕಬಳಿಸಿದರು.ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 249 ಎಸೆತಗಳಲ್ಲಿ 1 ಸಿಕ್ಸ್ ಮತ್ತು 8 ಫೋರ್ಗಳೊಂದಿಗೆ 103 ರನ್ಗಳ ಭರ್ಜರಿ ಶತಕ ಬಾರಿಸಿದರು.
ಅಭಿನವ್ ಮನೋಹರ್ ಅದ್ಭುತ ಪ್ರದರ್ಶನ
ಅವರ ಜೊತೆಗೆ ಏಳನೇ ಕ್ರಮಾಂಕದಲ್ಲಿ ಬಂದ ಅಭಿನವ್ ಮನೋಹರ್ ಕೂಡ ಅದ್ಭುತ ಆಟ ತೋರಿಸಿ 161 ಎಸೆತಗಳಲ್ಲಿ 2 ಸಿಕ್ಸ್ ಮತ್ತು 11 ಫೋರ್ಗಳೊಂದಿಗೆ 96 ರನ್ ಬಾರಿಸಿದರು.
ನಾಲ್ಕನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ 8 ವಿಕೆಟ್ ಕಳೆದುಕೊಂಡು 309 ರನ್ ಗಳಿಸಿತು. ಎರಡೂ ತಂಡಗಳು ಗೆಲುವು ಸಾಧಿಸಲು ಸಾಧ್ಯವಾಗದ ಕಾರಣ ಪಂದ್ಯ Draw ಆಗಿ ಅಂತ್ಯಗೊಂಡಿತು.
ಇದನ್ನು ನೋಡಿ : 36 ವರ್ಷಗಳ ಬಳಿಕ ರೋಚಕ ಜಯ ಸಾಧಿಸಿದ ಪಾಕಿಸ್ತಾನ್




