Ranji Trophy 2025: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿಯ ಗ್ರೂಪ್-ಡಿ ಪಂದ್ಯದಲ್ಲಿ ದೆಹಲಿ ವಿರುದ್ಧ ಜಮ್ಮು-ಕಾಶ್ಮೀರ ತಂಡ ಭರ್ಜರಿ ಜಯ ಸಾಧಿಸಿದೆ.

Ranji Trophy 2025: 65 ವರ್ಷಗಳ ನಂತರ ಮೊದಲ ಬಾರಿಗೆ ಜಮ್ಮು–ಕಾಶ್ಮೀರ ತಂಡ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಗ್ರೂಪ್-ಡಿ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಜಮ್ಮು–ಕಾಶ್ಮೀರದಿಂದ ಇತಿಹಾಸ – ದೆಹಲಿ ವಿರುದ್ಧ ಮೊದಲ ಗೆಲುವು ರಣಜಿಯಲ್ಲಿ!
ಟಾಸ್ ಗೆದ್ದು ಜಮ್ಮು–ಕಾಶ್ಮೀರ ತಂಡ ಬೌಲಿಂಗ್ ಆಯ್ದುಕೊಂಡಿತು. ದೆಹಲಿ ತಂಡ ಪ್ರಥಮ ಇನಿಂಗ್ಸ್ನಲ್ಲಿ 211 ರನ್ ಗಳಿಸಿ ಆಲೌಟ್ ಆಯಿತು. ಬಳಿಕ ಜಮ್ಮು–ಕಾಶ್ಮೀರ 310 ರನ್ಗಳಿಸಿ 99 ರನ್ ಮುನ್ನಡೆ ಪಡೆದಿತು.
ರಣಜಿ ಟ್ರೋಫಿಯಲ್ಲಿ ಸಂಚಲನ: ದೆಹಲಿಯನ್ನು ಮಣಿಸಿದ ಜಮ್ಮು–ಕಾಶ್ಮೀರ
ದ್ವಿತೀಯ ಇನಿಂಗ್ಸ್ನಲ್ಲಿ ದೆಹಲಿ ತಂಡ 277 ರನ್ ಗಳಿಸಿ ಆಲೌಟ್ ಅಗಿ, ಜಮ್ಮು–ಕಾಶ್ಮೀರಕ್ಕೆ 179 ರನ್ ಗುರಿ ನೀಡಿತು. ಜಮ್ಮು–ಕಾಶ್ಮೀರ 3 ವಿಕೆಟ್ ನಷ್ಟಕ್ಕೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದನ್ನು ಓದಿ: Ranji Trophy : ಇಂದಿನಿಂದ ರಣಜಿ ಟ್ರೋಫಿ ಆರಂಭ
ಆಕಿಬ್ ನಬಿಯ ಮಿಂಚು – ಜಮ್ಮು ಕಾಶ್ಮೀರದ ಪರಾಕ್ರಮಕ್ಕೆ ಬಲಿಷ್ಠ ದೆಹಲಿ ಶರಣು
ಆಕಿಬ್ ನಬಿ ಮೊದಲ ಇನಿಂಗ್ಸ್ನಲ್ಲಿ ಕೇವಲ 35 ರನ್ಗೆ 5 ವಿಕೆಟ್ ಕಬಳಿಸಿ, ಪಂದ್ಯ ಶ್ರೇಷ್ಠ (Man of the Match) ಪ್ರಶಸ್ತಿ ಪಡೆದಿದ್ದಾರೆ.

65 ವರ್ಷಗಳ ಕಾಯುವಿಕೆಗೆ ಜಮ್ಮು–ಕಾಶ್ಮೀರದ ಐತಿಹಾಸಿಕ ವಿಜಯ
ಜಮ್ಮು–ಕಾಶ್ಮೀರ ಪ್ಲೇಯಿಂಗ್ 11:
ಖಮ್ರಾನ್ ಇಕ್ಬಾಲ್, ಶುಭಂ ಖಜುರಿಯಾ, ಪರಾಸ್ ಡೋಗ್ರ, ಅಬ್ದುಲ್ ಸಮದ್, ಕನ್ಹಯ್ಯಾ ವಾಧವನ್, ವಿವ್ರಾಂತ್ ಶರ್ಮಾ, ಅಬಿದ್ ಮುಷ್ತಾಕ್, ಆಕಿಬ್ ನಬಿ, ವಂಶಜ್ ಶರ್ಮಾ, ಸಾಹಿಲ್ ಲೋತ್ರಾ, ಸುನಿಲ್ ಕುಮಾರ್.
ದೆಹಲಿ ಪ್ಲೇಯಿಂಗ್ 11:
ಅರ್ಪಿತ್ ರಾಣಾ, ಸನತ್ ಸಾಂಗ್ವಾನ್, ಯಶ್ ಧುಲ್, ಆಯುಷ್ ದೋಸೆಜಾ, ಸುಮಿತ್ ಮಾಥುರ್, ಆಯುಷ್ ಬದೋನಿ, ಅನೂಜ್ ರಾವತ್ , ಮನನ್ ಭಾರದ್ವಾಜ್, ಹೃತಿಕ್ ಶೋಕೀನ್, ಸಿಮರ್ಜೀತ್ ಸಿಂಗ್, ಮನಿ ಗ್ರೆವಾಲ್.
MUST WATCH: ಕಿಂಗ್ಸ್ ವರ್ಸಸ್ ಸೂಪರ್ ಕಿಂಗ್ಸ್ ಚೆಪಾಕ್ ಚಾಲೆಂಜ್ ಗೆಲ್ಲೋದ್ಯಾರು




