Dharmendra Discharged : ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ (89) ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಧರ್ಮೇಂದ್ರ ಡಿಸ್ಚಾರ್ಜ್
ಪುತ್ರರಾದ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಸೇರಿದಂತೆ ಕುಟುಂಬ ಸದಸ್ಯರು ನಟನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಧರ್ಮೇಂದ್ರ ಅವರನ್ನು ಇಂದು ಬೆಳಗ್ಗೆ 7.30ರ ಸುಮಾರಿಗೆ ಆಸ್ಪತ್ರೆಯಿಂದ Discharge ಮಾಡಲಾಗಿದೆ.
ಇದನ್ನು ಓದಿ : ಗಂಡನ ಜೊತೆ ಪಾಂಡಿಚೇರಿಯಲ್ಲಿ Vaishnavi Gowda
ಸುಳ್ಳು ವದಂತಿ
“ಧರ್ಮೇಂದ್ರ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಈಗಿನಿಂದ ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಯಲಿದೆ” ಡಾ. ಪ್ರತೀತ್ ಸಮ್ದಾನಿ ಪಿಟಿಐಗೆ ತಿಳಿಸಿದ್ದಾರೆ. ಈ ನಡುವೆ, ಧರ್ಮೇಂದ್ರ ಅವರ ನಿವಾಸಕ್ಕೆ ಆಂಬುಲೆನ್ಸ್ ಬಂದು ಹೋಗುತ್ತಿರುವ ದೃಶ್ಯಗಳು Social Media ಗಳಲ್ಲಿ Viral ಆಗಿದ್ದವು. ಇದಾದ ನಂತರ, ನಟ ನಿಧನರಾಗಿದ್ದಾರೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಹೇಮಾ ಮಾಲಿನಿ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ
ಆದರೆ, ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ಮತ್ತು ಪತ್ನಿ ಹೇಮಾ ಮಾಲಿನಿ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದು, “ಅವರು ಸಂಪೂರ್ಣ ಚೇತರಿಸಿಕೊಂಡು ಮನೆಯಲ್ಲಿದ್ದಾರೆ. ವದಂತಿಗಳಿಗೆ ನಂಬಿಕೆ ಕೊಡಬೇಡಿ” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನು ನೋಡಿ : ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಕೇಸ್ ಮಾಜಿ ಸಚಿವ ರಾಜಣ್ಣ ಶಾಕಿಂಗ್ ಸ್ಟೇಟ್ ಮೆಂಟ್




