Vaishnavi Gowda : ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ, ಸದ್ಯ ಕಿರುತೆರೆಯಿಂದ ದೂರ ಉಳಿದಿದ್ದು, ಇದೀಗ ತಮ್ಮ ಪತಿ ಅನುಕೂಲ್ ಮಿಶ್ರ ಜೊತೆಗೆ ಪಾಂಡಿಚೇರಿಯಲ್ಲಿ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ.

ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ (Vaishnavi Gowda) ಮದುವೆಯಾದ ಬಳಿಕ ತಮ್ಮ ವೈವಾಹಿಕ ಜೀವನವನ್ನು ಸಂಪೂರ್ಣವಾಗಿ ಎಂಜಾಯ್ ಮಾಡುತ್ತಿದ್ದಾರೆ.
ಸದ್ಯ, ಅವರು ತಮ್ಮ ಪತಿ ಅನುಕೂಲ್ ಮಿಶ್ರಾ ಜೊತೆ ಚಳಿಗಾಲದ ರಜೆಯಿಗಾಗಿ ಪಾಂಡಿಚೇರಿಗೆ ತೆರಳಿದ್ದಾರೆ. ಅಲ್ಲಿನ ಸುಂದರ ಪೋಟೋಗಳನ್ನು ವೈಷ್ಣವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಗಂಡನ ಜೊತೆ ಫೋಟೋಗಳು
ವೈಷ್ಣವಿ ತಮ್ಮ ಪತಿ ಜೊತೆ ಪಾಂಡಿಚೇರಿ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಅವರು ಫ್ರೆಂಚ್ ಕಾಲನಿ ಸೇರಿದಂತೆ ವಿವಿಧ ತಾಣಗಳಿಗೆ ಭೇಟಿ ನೀಡಿ, ಗಂಡನ ಜೊತೆ ಮೋಜು ಮಸ್ತಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರ ಫೋಟೋಗಳೊಂದಿಗೆ, ತಮ್ಮ ಪತಿಯಿಗಾಗಿ “ಒಂದೇ ಒಂದು ಸಲ ಸೋತು ಬಿಡು ನೀ” ಎಂಬ ಹಾಡುನ್ನು ಸಹ ವಿಶೇಷವಾಗಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : BBK 12 : ಬಿಗ್ಬಾಸ್ ಮನೆಯಲ್ಲಿ `ಥೂ’ ಆರ್ಭಟ
ಸೀರಿಯಲ್ ಹಿನ್ನಲೆ
ವೈಷ್ಣವಿ ಗೌಡ ‘ಅಗ್ನಿ ಸಾಕ್ಷಿ’ ಮೂಲಕ ಜನಪ್ರಿಯತೆ ಪಡೆದ ನಟಿ. ಕೊನೆಯದಾಗಿ ಅವರು ‘ಸೀತಾರಾಮ’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.
ಅದಾದ ಬಳಿಕ, ನ್ಯಾಯಮಯ ಮೈಕ್ರೋ ಸಿರೀಸ್ನಲ್ಲಿ ನಟ ಸ್ಕಂದ ಅಶೋಕ್ ಜೊತೆ ನಟಿಸಿದ್ದರು, ಮತ್ತು ಈ ಸೀರೀಸ್ ಪ್ರಸ್ತುತ ಪ್ರಸಾರವಾಗುತ್ತಿದೆ.

ಜೂನ್ನಲ್ಲಿ ವೈವಾಹಿಕ ಜೀವನ ಪ್ರಾರಂಭ
ಈ ವರ್ಷ ಜೂನ್ ತಿಂಗಳಲ್ಲಿ, ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರಾ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬೆಂಗಳೂರು ಹೊರವಲಯದಲ್ಲಿ ನಡೆದ ಅದ್ಧೂರಿ ಮದುವೆಗೆ ಹಲವು ಕಿರುತೆರೆ ನಟ–ನಟಿಯರು ಭಾಗವಹಿಸಿದ್ದರು.
ಸಂಬಂಧ ಕೂಡಿ ಬಂದದ್ದು ಹೀಗೆ
ಅನುಕೂಲ್ ಮಿಶ್ರಾ ಅವರು ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚಂಡೀಗಢದವರು. ಮ್ಯಾಟ್ರಿಮೋನಿ ಮೂಲಕ ಇವರಿಬ್ಬರ ಪರಿಚಯ ಆಗಿ ಮದುವೆಯಾಗಿತ್ತು.
ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದು ನಟಿ ವೈಷ್ಣವಿ ಗೌಡ ಹಲವಾರು ಬಾರಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನು ನೋಡಿ : ‘ಜನರಿಗೆ ಕಾಫಿ, ಟೀ ಯಾಕೆ ಕುಡಿಸ್ತೀರಾ, ಉಚ್ಚೆ ಕುಡಿಸಿ..’ ಬಿಜೆಪಿ ಟೀಕೆ ಮಾಡುವ ಭರದಲ್ಲಿ ಹೇಳಿದ ಸಂತೋಷ್ ಲಾಡ್!




