Nandi Hills ಮಾನ್ಸೂನ್ ಮ್ಯಾರಥಾನ್ ವೇಳೆ ದುರಂತ

ಪ್ರಸಿದ್ಧ Nandi Hills ನಲ್ಲಿ ಆಯೋಜಿಸಲಾಗಿದ್ದ ‘ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್’ ವೇಳೆ ದುರಂತವೊಂದು ಸಂಭವಿಸಿದ್ದು, ಓಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುವೊಬ್ಬರು ಸಾವನ್ನಪ್ಪಿದ್ದಾರೆ.
ನಡೆದಿದ್ದೇನು?
ಮೃತರನ್ನು ಅಮನ್ ದೀಪ್ ಸಿಂಗ್ ಜಗಡೆ ಎಂದು ಗುರುತಿಸಲಾಗಿದೆ. ಅವರು 21 ಕಿಲೋಮೀಟರ್ ವಿಭಾಗದ ಹಾಫ್ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು. ನಂದಿ ಗಿರಿಧಾಮದ ಕಡಿದಾದ ಬೆಟ್ಟದ ರಸ್ತೆಯಲ್ಲಿ ಓಡುತ್ತಿದ್ದ ವೇಳೆ ಬೆಟ್ಟದ ಮೇಲ್ಭಾಗದ ಸಮೀಪ ತಲುಪಿದಾಗ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.
ಇದನ್ನು ಓದಿ : ಚಲಿಸುತ್ತಿದ್ದ ಬಸ್ ಚಾಲಕನಿಗೆ Heart Attack – ತಪ್ಪಿದ ಭಾರೀ ಅನಾಹುತ..!!

ತಕ್ಷಣವೇ ಗಮನಿಸಿದ ಸಂಘಟಕರು ಹಾಗೂ ಸಿಬ್ಬಂದಿ ಅವರಿಗೆ ಪ್ರಾಥಮಿಕ ನೆರವು ನೀಡಲು ಮುಂದಾದರು. ಬಳಿಕ ಅವರನ್ನು ಸಮೀಪದ ಮುದ್ದೇನಹಳ್ಳಿ ಬಳಿಯಿರುವ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಹೃದಯಾಘಾತದಿಂದ’ ಕ್ರೀಡಾಪಟು ಸಾವು!
ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ತೀವ್ರ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನು ನೋಡಿ : UDUPIಯಲ್ಲಿ SHOOTOUT ಮಾಡಿ ಬೆಚ್ಚಿಬೀಳಿಸಿದ್ದ ಆರೋಪಿಗೆ ಗುಂಡೇಟು




