ಹಾವೇರಿಯಲ್ಲಿ ಭೀಕರ Fire Incident – ಲಕ್ಷಾಂತರ ಮೌಲ್ಯದ ಜೋಳ ಸುಟ್ಟು ಕರಕಲು

ದೇಶಾದ್ಯಂತ ಜನರು ಚಳಿಗೆ ತತ್ತರಿಸಿ ಹೋಗ್ತಿದ್ದಾರೆ. ಆದ್ರೆ ಬೇಸಿಗೆ ಆರಂಭಕ್ಕೂ ಮುನ್ನವೇ ಅಲ್ಲಲ್ಲಿ ಬೆಂಕಿ ಅನಾಹುತಗಳು ಸಂಭವಿಸುತ್ತಿವೆ. ಇದೀಗ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ Fire Incident ಸಂಭವಿಸಿ, ರೈತ ಬೆಳೆದಂತಹ ಗೋವಿನ ಜೋಳದ ಬೆಳೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಇನಾಮ್ ದ್ಯಾವನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಹೊತ್ತಿ ಉರಿದ ಜೋಳದ ರಾಶಿ
ಇನಾಮ್ ದ್ಯಾವನಕೊಪ್ಪ ಗ್ರಾಮದ ರೈತ ಶಿವಾನಂದ ದೇವನಹಳ್ಳಿ ಎಂಬುವರಿಗೆ ಸೇರಿದ ಜಮೀನಿನಲಿ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ತಂತಿಗಳ ದೋಷದಿಂದ ಜಮೀನಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಜೋಳದ ರಾಶಿ ಹೊತ್ತಿ ಉರಿದಿದೆ.
ಇದನ್ನು ಓದಿ : ಭೀಕರ ಕಾರು Accident – ಶಿಕ್ಷಕ ದಾರುಣ ಸಾವು

Fire Incident ನಿಂದ ಜೋಳ ಸಂಪೂರ್ಣವಾಗಿ ಸುಟ್ಟು ಕರಕಲು
ಇದರಿಂದ ಜಮೀನಿನಲ್ಲಿ ಸಂಗ್ರಹಿಸಿದ್ದ ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ ಗೋವಿನ ಜೋಳ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇನ್ನು ಈ ಘಟನೆಗೆ ಹೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ರೈತ ಶಿವಾನಂದ ಆರೋಪಿಸಿದ್ದು, ಘಟನೆ ನಡೆದ ಬಳಿಕವೂ ಯಾವೊಬ್ಬ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಡ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡ್ತಾರಾ?
ಸದ್ಯ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಬಡ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡ್ತಾರಾ ಇಲ್ವಾ ಎಂಬುದನ್ನ ಕಾದು ನೋಡಬೇಕಿದೆ.

ಇದನ್ನು ನೋಡಿ : ಮರಕ್ಕೆ ಕಾರು ಡಿಕ್ಕಿಯಾಗಿ ಆಕ್ಸಿಡೆಂಟ್ – ಕಾರಿನಲ್ಲಿದ್ದ ಶಿಕ್ಷಕ ದಾರುಣ ಸಾ*




