ಹೊಸ ವರ್ಷದ ಆರಂಭದಲ್ಲೇ ಸಾಲು ಸಾಲು Accident ಗಳು.

ಹೊಸ ವರ್ಷ ಆರಂಭದಲ್ಲೇ ಸಾಲು ಸಾಲು ಅಪಘಾತಗಳು ಸಂಭವಿಸ್ತಾ ಇದ್ದು, ಅಮಾಯಕ ಜನರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ರಸ್ತೆ ಬದಿಯ ಮರವೊಂದಕ್ಕೆ ಕಾರು ಡಿಕ್ಕಿಯಾಗಿ ಭೀಕರ Accident ಸಂಭವಿಸಿದ್ದು, ಕಾರಿನಲ್ಲಿದ್ದ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಈ ಭೀಕರ ಅಪಘಾತ ದೊಡ್ಡಬಳ್ಳಾಪುರ ತಾಲೂಕಿನ ಹೊರವಲಯದ ಆಕಾಶವಾಣಿ ಸಮೀಪ ನಡೆದಿದೆ.
ಸರ್ಕಾರಿ ಶಾಲಾ ಶಿಕ್ಷಕ ದಾರುಣ ಸಾವು
ದೊಡ್ಡಬಳ್ಳಾಪುರ ಹೊರವಲಯದ ಆಕಾಶವಾಣಿ ಬಳಿ ಬರ್ತಿದ್ದ ಕಾರೊಂದು ರಸ್ತೆಯ ಪಕ್ಕದಲ್ಲೇ ಇದ್ದ ಮರವೊಂದಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ ಸರ್ಕಾರಿ ಶಾಲಾ ಶಿಕ್ಷಕ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ನಗರದ ಮಾರ್ಕೆಟ್ ಶಾಲೆಯ ಮುಖ್ಯ ಶಿಕ್ಷಕ ಜಗದೀಶಯ್ಯ ಮೃತ ದುರ್ದೈವಿಯಾಗಿದ್ದಾರೆ.
ಇದನ್ನು ಓದಿ : ‘ಟಾಕ್ಸಿಕ್’ನಲ್ಲಿ ರೆಬೆಲ್ ‘ರೆಬೆಕಾ’: ಯಾರು ಈ ಸುಂದರಿ?

ಶಾಲೆಗೆ ಬರುವ ವೇಳೆ ಅಪಘಾತ
ಇನ್ನು ಮೃತ ಶಿಕ್ಷಕ ಜಗದೀಶಯ್ಯ ನೆಲಮಂಗಲದ ಬಸವನಹಳ್ಳಿಯಲ್ಲಿ ವಾಸವಾಗಿದ್ದು, ಇಂದು ಬೆಳಗ್ಗೆ ಶಾಲೆಗೆ ಬರುವ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಶಿಕ್ಷಕ ಸಾವನ್ನಪ್ಪಿದ್ದು ಕುಟುಂಬಸ್ಥರು ಹಾಗೂ ಶಾಲಾ ಶಿಕ್ಷಕರು ಕಂಬನಿ ಮಿಡಿದ್ದಾರೆ.
ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ದೊಡ್ಡಬೆಳಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನು ನೋಡಿ : PARAMESHWAR | ಗ್ರೇಟರ್ ತುಮಕೂರು ಆಗುತ್ತಾ ರಾಜ್ಯಪಾಲರ ಸಹಿ ಆದ್ಮೇಲೆ ಜಾರಿ




