ಯಶ್ ಅಭಿನಯದ Toxic ಸಿನಿಮಾದ ಒಂದೊಂದೇ ಪೋಸ್ಟರ್ಗಳು ರಿವೀಲ್ ಆಗ್ತಿವೆ.

ಮಾರ್ಚ್ 19 ರಂದು ವಿಶ್ವದಾದ್ಯಂತ ತೆರೆಕಾಣಲು ನಿರೀಕ್ಷಿತ Toxic ಚಿತ್ರದ ಮೊದಲ ಪೋಸ್ಟರ್ಗಳು ರಿವೀಲ್ ಆಗಿವೆ. ಚಿತ್ರತಂಡ ಪ್ರತಿ ಪಾತ್ರದ ಫಸ್ಟ್ ಲುಕ್ ಪೋಸ್ಟರ್ಗಳನ್ನು ಪ್ರಕಟಿಸುತ್ತಿದ್ದು, ಅಭಿಮಾನಿಗಳಲ್ಲಿ ದೊಡ್ಡ ಉತ್ಸಾಹವನ್ನು ಉಂಟುಮಾಡಿದೆ.

ಪಾತ್ರಗಳ ಬಗ್ಗೆ ಹಿಂಟ್
ಟಾರಾ ಸುತಾರಿಯಾ ರೆಬೆಕಾ ಪಾತ್ರದಲ್ಲಿ ಪರಿಚಯಗೊಂಡಿದ್ದು, ಈ ಮೂಲಕ ಕಥೆಯ ಮತ್ತೊಂದು ಮುಖ್ಯ ಪಾತ್ರಕ್ಕೆ ಓದುಗರ ಗಮನ ಸೆಳೆಯುತ್ತಿದೆ. ಇದಕ್ಕೂ ಮುಂಚೆ, ಕಿಯಾರಾ ಅಡ್ವಾನಿ ನಾಡಿಯಾ ಪಾತ್ರ, ಹುಮಾ ಖುರೇಶಿ ಎಲೆಜಬೆತ್ ಹಾಗೂ ನಯನ ತಾರಾ ಗಂಗಾ ಪಾತ್ರಗಳ ಬಗ್ಗೆ ಹಿಂಟ್ ನೀಡಲಾಗಿತ್ತು. ಅವರ ಫಸ್ಟ್ಲುಕ್ ಪೋಸ್ಟರ್ಗಳು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿವೆ.
ಇದನ್ನು ನೋಡಿ : ಜೋಳದ ಚಿಗುರು ಸಿಪ್ಪೆ ಸೇವಿಸಿ 50ಕ್ಕೂ ಹೆಚ್ಚು ಕುರಿಗಳು ಸಾವು

ಗೀತು ಮೋಹನ್ದಾಸ್ ನಿರ್ದೇಶ
ಚಿತ್ರತಂಡವು ಗೀತು ಮೋಹನ್ದಾಸ್ ನಿರ್ದೇಶನದಲ್ಲಿ ಯಶ್ ಅವರ ಅಭಿನಯದ ಟಾಕ್ಸಿಕ್ ಸಿನಿಮಾ ಸಿದ್ಧಪಡಿಸುತ್ತಿದ್ದು, ವಿಶ್ವದಾದ್ಯಂತ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಯಶ್ ಹುಟ್ಟುಹಬ್ಬದಂದು ಯಾವ ರೀತಿಯ ವಿಶೇಷ ಗಿಫ್ಟ್ ಸಿಗಲಿದೆ ಎಂಬ ಕುತೂಹಲ ಸಹ ಅಭಿಮಾನಿಗಳಲ್ಲಿ ಮೂಡಿಸಿದೆ.

ಇದನ್ನು ನೋಡಿ : ಗ್ರಾಹಕರಿಗೆ ಭರ್ಜರಿ ಗುಡ್ನ್ಯೂಸ್; BSNL ಬಳಕೆದಾರರಿಗೆ ಸೂಪರ್ ನ್ಯೂಸ್..!




