Toxic Movie : ನಯನತಾರಾ ‘ಟಾಕ್ಸಿಕ್’ ಸಿನಿಮಾದಲ್ಲಿ ಗನ್ ಹಿಡಿದು ಎಂಟ್ರಿ ಕೊಟ್ಟಿದ್ದಾರೆ. ಅವರ ಮಾಸ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಯಶ್ ಸಹ-ಬರೆದ ಕಥೆಗೆ ಗೀತು ಮೋಹನ್ದಾಸ್ ನಿರ್ದೇಶಿಸಿದ್ದಾರೆ.

Toxic Movie : ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ರಿಲೀಸ್ಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿಯಿದ್ದು, ಚಿತ್ರದ ಪಾತ್ರಗಳನ್ನು ಒಂದೊಂದಾಗಿ ಪರಿಚಯಿಸುವ ಕೆಲಸವನ್ನು ಚಿತ್ರತಂಡ ಮಾಡ್ತಿದೆ.
ನಯನತಾರಾ ಗಂಗಾ ಲುಕ್ ರಿವೀಲ್
ಈಗಾಗಲೇ ಕಿಯಾರಾ ಅಡ್ವಾಣಿ ಹಾಗೂ ಹುಮಾ ಖುರೇಷಿ ಪಾತ್ರಗಳ ಅನಾವರಣಗೊಂಡಿದ್ದು, ಇದೀಗ ನಟಿ ನಯನತಾರಾ ಅವರ ಪಾತ್ರವನ್ನು ಬಹಿರಂಗಪಡಿಸಲಾಗಿದೆ. ‘ಟಾಕ್ಸಿಕ್’ ಚಿತ್ರದಲ್ಲಿ ನಯನತಾರಾ ಅವರು ಗಂಗಾ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾದಲ್ಲಿ ನಯನತಾರಾ ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇತ್ತು. ಇದೀಗ ರಿಲೀಸ್ ಮಾಡಿರುವ ಪೋಸ್ಟರ್ನಲ್ಲಿ ನಯನತಾರಾ ಅವರ ಲುಕ್ ಫ್ಯಾನ್ಸ್ರನ್ನು ಆಕರ್ಷಿಸಿದೆ.
ಇದನ್ನೂ ಓದಿ : ಟಾಕ್ಸಿಕ್’ ಸಿನಿಮಾ ನಾಯಕಿಯ ಫಸ್ಟ್ ಲುಕ್ ರಿಲೀಸ್

ಶಾಟ್ಗನ್ ಹಿಡಿದ ನಯನತಾರಾ: ‘ಟಾಕ್ಸಿಕ್’ ಪೋಸ್ಟರ್ ವೈರಲ್
ಅರಮನೆಯ ಮಾದರಿಯ ಸೆಟ್ನಲ್ಲಿ ನಯನತಾರಾ ಎಂಟ್ರಿ ನೀಡುತ್ತಿರುವ ದೃಶ್ಯ ಪೋಸ್ಟರ್ನಲ್ಲಿ ಕಾಣಿಸಿಕೊಳ್ಳುತ್ತದೆ. ಹಿಂಭಾಗದಲ್ಲಿ ವಿದೇಶಿಗರು ಕಾವಲು ಕಾಯುತ್ತಿರುವುದು, ಕೈಯಲ್ಲಿ ಶಾಟ್ಗನ್ ಹಿಡಿದಿರುವ ನಯನತಾರಾ ಅವರ ಲುಕ್ ಚಿತ್ರಕ್ಕೆ ಮಾಸ್ ಅಂಶವನ್ನು ತಂದಿದೆ.
ಜನವರಿ 8ರಂದು ನಟ ಯಶ್ ಅವರ ಜನ್ಮದಿನವಿದ್ದು, ಈ ಸಂದರ್ಭದಲ್ಲಿ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅದಕ್ಕೂ ಮುನ್ನ ಎಲ್ಲಾ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಯೋಜನೆಯಲ್ಲಿ ಚಿತ್ರತಂಡ ಇರುವಂತೆ ಕಾಣುತ್ತಿದೆ.
ಮಾರ್ಚ್ ನಲ್ಲಿ ರಿಲೀಸ್ ಅಗಲಿದೆ ಮೂವಿ
ಹೀಗಾಗಿ ಇದುವರೆಗೆ ಬಿಡುಗಡೆಗೊಂಡ ಎಲ್ಲಾ ಪೋಸ್ಟರ್ಗಳು ಕಲರ್ಫುಲ್ ಆಗಿ ಗಮನ ಸೆಳೆದಿವೆ. ‘ಟಾಕ್ಸಿಕ್’ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದು, ಕಥೆಯನ್ನು ಯಶ್ ಅವರ ಜೊತೆಗೂಡಿ ರಚಿಸಿದ್ದಾರೆ.
ಈಗಾಗಲೇ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ರಿವೀಲ್ ಆದ ಪೋಸ್ಟರ್ನಲ್ಲಿ ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

MUST WATCH : ಬೈಕ್ಗೆ ಗುದ್ದಿದ KSRTC ಬಸ್- ಯುವತಿ ಬಚಾವ್ ಆಗಿದ್ದೇ ರೋಚಕ




