Toxic : ಯಶ್ಗೆ ನಾಯಕಿಯಾದ ಕಿಯಾರಾ ಅಡ್ವಾಣಿ; ಫಸ್ಟ್ ಲುಕ್ ರಿಲೀಸ್.

2026ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ನಟ ಯಶ್ ಅವರ ‘ಟಾಕ್ಸಿಕ್’ ಚಿತ್ರತಂಡವು ಕಿಯಾರಾ ಅಡ್ವಾಣಿ ಅವರ ಪಾತ್ರವನ್ನು ಪರಿಚಯಿಸುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಚಿತ್ರದಲ್ಲಿ ಕಿಯಾರಾ ಅವರು ‘ನಾದಿಯಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ ಕೆಲವು ಸುದ್ದಿ ಮೂಲಗಳಲ್ಲಿ ಕಿಯಾರಾ Toxic ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದ್ದರೂ, ಚಿತ್ರದ ತಂಡ ಇದನ್ನು ಖಚಿತಪಡಿಸಿರಲಿಲ್ಲ. ಆದರೆ ಈಗ ಫಸ್ಟ್ ಲುಕ್ ಬಿಡುಗಡೆ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಇದನ್ನು ಓದಿ : ಚಿನ್ನ ಖರೀದಿಸೋರಿಗೆ ಸಿಹಿ ಸುದ್ದಿ – ಬೆಲೆಯಲ್ಲಿ ಅನಿರೀಕ್ಷಿತ ಬದಲಾವಣೆ

ಫಸ್ಟ್ ಲುಕ್ನಲ್ಲಿ ಕಿಯಾರಾ ಸರ್ಕಸ್ ಹಿನ್ನೆಲೆಯ ಗ್ಲಾಮರಸ್ ಬೆಳಕಿನಲ್ಲಿದ್ದರೂ, ಅವರ ನೋಟದಲ್ಲಿ ದುಃಖ ಮತ್ತು ಭಾವನಾತ್ಮಕತೆ ಸ್ಪಷ್ಟವಾಗಿದೆ. ಇದು ಕೇವಲ ಗ್ಲಾಮರ್ ಪಾತ್ರವಲ್ಲದೆ, ನಟನೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಶಕ್ತಿಯುತ ಪಾತ್ರ ಎಂಬ ಸೂಚನೆ ನೀಡುತ್ತಿದೆ. ಈ ಪಾತ್ರವನ್ನು ಕಿಯಾರಾ ವೃತ್ತಿ ಜೀವನಕ್ಕೆ ಹೊಸ ಮೈಲಿಗಲ್ಲಾಗಬಹುದಾದ ಸಾಧ್ಯತೆ ಇದೆ.
ಕಿಯಾರಾ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ದೇಶಕಿ ಗೀತು ಮೋಹನ್ದಾಸ್, “ಕೆಲವು ನಟನೆಯು ಕೇವಲ ಚಿತ್ರಕ್ಕೆ ಸೀಮಿತವಾಗುವುದಿಲ್ಲ, ಅವು ಕಲಾವಿದರನ್ನು ಮರು ವ್ಯಾಖ್ಯಾನಿಸುತ್ತವೆ. ಕಿಯಾರಾ ಈ ಚಿತ್ರದಲ್ಲಿ ನೀಡಿದ ಅಭಿನಯವು ಪರಿವರ್ತನಾತ್ಮಕವಾಗಿದೆ. ಒಬ್ಬ ನಿರ್ದೇಶಕಿಯಾಗಿ ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರು ನೀಡಿದ ಅಭಿನಯಕ್ಕಾಗಿ ಮತ್ತು ನಮ್ಮ ಜರ್ನಿಯಲ್ಲಿ ಅವರು ತಂದುಕೊಂಡ ನಂಬಿಕೆ ಮತ್ತು ಪ್ರೀತಿಗಾಗಿ ನಾನು ಹೆಮ್ಮೆಪಡುತ್ತೇನೆ” ಎಂದು ಹೇಳಿದ್ದಾರೆ.

ಇದನ್ನು ನೋಡಿ : ಕಾಮುಕ ಲೋಕೇಶ್ವರ ಸ್ವಾಮಿಗೆ 35 ವರ್ಷ ಜೈಲು




