ವಿಕೋಪಕ್ಕೆ ತಿರುಗಿದ ಸ್ಟಾರ್ ವಾರ್ – 15 ಖಾತೆ, 150 ಪೋಸ್ಟ್ ವಿರುದ್ಧ ವಿಜಯಲಕ್ಷ್ಮಿ ದೂರು.

ಸ್ಯಾಂಡಲ್ವುಡನ್ನ ಫ್ಯಾನ್ಸ್ ವಾರ್ ಇನ್ನೊಂದು ಹಂತಕ್ಕೆ ಹೋಗಿದೆ. ಅಶ್ಲೀಲ ಕಾಮೆಂಟ್ ವಿಚಾರವಾಗಿ ದರ್ಶನ್ ಪತ್ನಿ Vijayalakshmi ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನು ಓದಿ : ಟಿನ್ನರ್ ಕುಡಿದು ಪ್ರಾಣಬಿಟ್ಟ 3 ವರ್ಷದ ಬಾಲಕಿ
150ಕ್ಕೂ ಹೆಚ್ಚು ಅಶ್ಲೀಲ ಕಾಮೆಂಟ್
ವಿಜಯಲಕ್ಷ್ಮೀ ಅವರ ದೂರಿನ ಪ್ರಕಾರ, 15 ಇನ್ಸ್ಟಾಗ್ರಾಮ್ IDಗಳಿಂದ 150ಕ್ಕೂ ಹೆಚ್ಚು ಅಶ್ಲೀಲ ಕಾಮೆಂಟ್ ಬರೆದಿದ್ದು, ಸುದೀಪ್ ಫ್ಯಾನ್ಸ್ನ ಕೆಲವು ಸದಸ್ಯರು ವಿಜಯಲಕ್ಷ್ಮೀ ಅವರಿಗೆ ಅಶ್ಲೀಲ ಪದಗಳನ್ನು ಬಳಸಿ ಕಿರುಚುತ್ತಿರುವ ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ, CCB ಜಂಟಿ ಆಯುಕ್ತ ಅಜಯ್ ಹಿಲೋರಿಗೆ ದೂರು ಸಲ್ಲಿಸಲಾಗಿದೆ.
ಆರೋಪಿಗಳ ವಿರುದ್ಧ ಶಿಸ್ತು ಕ್ರಮ
Vijayalakshmi ಸಾಕ್ಷಿಗಳೊಂದಿಗೆ ಪೊಲೀಸರ ಬಳಿ ಹಾಜರಾಗಿ, ಆರೋಪಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ನಟಿ ರಮ್ಯಾ ಕೂಡ ಇದೇ ರೀತಿಯ ದೂರು ನೀಡಿದ್ದು, ಕೆಲವು ಕಿಡಿಗೇಡಿಗಳು ಜೈಲಿಗೆ ಸೇರಿದ ಘಟನೆಗಳು ನಡೆದಿದೆ. ಪೊಲೀಸ್ ಇಲಾಖೆ ಈ ಪ್ರಕರಣದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ.
ಇದನ್ನು ನೋಡಿ : ಕುಟುಂಬ ಸಮೇತರಾಗಿ ರಾಯರ ದರ್ಶನ ಪಡೆದ ರಿಷಬ್ ಶೆಟ್ಟಿ




