ಪೇಯಿಂಟ್ ಮಿಕ್ಸ್ ಮಾಡುವ ಟಿನ್ನರ್ ಕುಡಿದು ಬಾಲಕಿ ಪ್ರಾಣಬಿಟ್ಟಿರುವ ದಾರುಣ ಘಟನೆ Kolar ನಲ್ಲಿ ನಡೆದಿದೆ.

ಪೇಯಿಂಟ್ ಮಿಕ್ಸ್ ಮಾಡುವ ಟಿನ್ನರ್ ಕುಡಿದು ಬಾಲಕಿ ಪ್ರಾಣಬಿಟ್ಟಿರುವ ದಾರುಣ ಘಟನೆ Kolar ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ. ಛಾನ್ಸಿ ಅಲಿಯಾಸ್ ಜಾನು (3) ಮೃತಪಟ್ಟ ಬಾಲಕಿ.
ಇದನ್ನು ನೋಡಿ : 45 Movie Review: ನಾಳೆ ತೆರೆಗೆ ಬರಲು ಸಿದ್ಧವಾಗಿರುವ 45 ಚಿತ್ರಕ್ಕೆ ನಾಯಕರು ಎಷ್ಟು?
ಬಾಲಕಿ ಎರಡು ದಿನಗಳ ಹಿಂದೆ ಟಿನ್ನರ್ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದಳು. ಕುಡಿಯುವ ನೀರು ಎಂದು ಭಾವಿಸಿ ಬಾಲಕಿ ಟಿನ್ನರ್ ಕುಡಿದಿದ್ದಳು. ಕೂಡಲೇ ಬಾಲಕಿಯನ್ನು ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾಳೆ
ಇನ್ನು ಈ ಘಟನೆ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಾಲಕಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಇದನ್ನು ಓದಿ : ರಾಜ್ ಕುಮಾರ್ ಅವ್ರೆ ವಾಲ್ಮೀಕಿ ನಿಗಮಕ್ಕೆ MD ಆಗಲಿ – ರಾಜಣ್ಣ ಗೆ ಮನವಿ




